ಮೈಸೂರು: ನನಗೆ ಯಾವುದೇ ಬಣ ಇಲ್ಲ, ನಾನೊಬ್ಬ ಬಿಜೆಪಿ ಕಾರ್ಯಕರ್ತ,ಅಧಿಕಾರ ಇರಲಿ, ಬಿಡಲಿ, ಜನರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿಯಲ್ಲಿ
ವಕ್ಫ್ ವಿರುದ್ಧದ ಹೋರಾಟದಲ್ಲಿ ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಪ್ರತಾಪ್ ಸಿಂಹ ಈ ರೀತಿ ಪ್ರತಿಕ್ರಿಯಿಸಿದರು.
ಮೈಸೂರು, ಚಾಮರಾನಗರ ಮತ್ತು ನಾನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯಲ್ಲಿ ವಕ್ಫ್ ಹೆಸರಿಗೆ ಸರ್ಕಾರಿ ಆಸ್ತಿಗಳನ್ನು ಬದಲಾಯಿಸಿದ ವಕ್ಫ್ ವಿರುದ್ಧ ನನ್ನ ಹೋರಾಟ ಅಷ್ಟೇ , ನಾನು ಜನರ ಕೆಲಸ ಮಾಡಲು ಬಂದಿದ್ದೇನೆ, ಅಧಿಕಾರ ಇದ್ದಾಗ ಜನಪರ ಕೆಲಸ ಮಾಡಿದ್ದೇನೆ,ಈಗ ಅಧಿಕಾರ ಇಲ್ಲದಿದ್ದರೂ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಸಿದರು.
ಈ ವೇಳೆ ವಕ್ಫ್ ನೋಟಿಫಿಕೇಷನ್ ಆಗಿರುವ ದಾಖಲೆಗಳನ್ನ ಬಿಡುಗಡೆ ಮಾಡಿದ ಪ್ರತಾಪ್ ಸಿಂಹ, ಯಾವಾಗ ಆರ್.ಟಿ.ಸಿ. ಗಳು ಬದಲಾಗುತ್ತವೆ ಎಂಬ ಆತಂಕದಲ್ಲಿ, ಮಠಗಳು ಮತ್ತು ರೈತರು ಇದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ಈ ರೀತಿಯಾಗುವುದು ಮಾಮೂಲು. ಈಗ ವಕ್ಫ್ ಆಸ್ತಿ ವಿಚಾರದಲ್ಲಿ ರೈತರಿಗೆ ಆತಂಕ ಸೃಷ್ಟಿಯಾಗಿದೆ. ಇದರಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, ಮೈಸೂರು – ಚಾಮರಾಜನಗರ ಭಾಗದಲ್ಲಿ 600ಕ್ಕೂ ಹೆಚ್ಚು ಎಕರೆ ಭೂಮಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಐದಾರು ಜನ ಮುಸ್ಲಿಂ ಮುಖಂಡರಿಂದ ತೆರವುಗೊಳಿಸಿ ಅಂತಾ. ಅದನ್ನು ಬೇರೆ ರೀತಿ ಬಿಂಬಿಸಲಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.
ಮಂತ್ರಾಲಯಕ್ಕೂ ನಾವೇ ಭೂಮಿ ಧಾನ ಮಾಡಿದ್ದು ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಇಸ್ಲಾಂ ಧರ್ಮಕ್ಕೂ , ಭಾರತಕ್ಕೂ ಏನು ಸಂಬಂಧ, ನಮಗೆ ಭೂಮಿ ದಾನ ಮಾಡಲು ನಿಮಗೆ ಭೂಮಿ ಎಲ್ಲಿಂದ ಬಂತು ಎಂದು ಪ್ರತಾಪ್ ಸಿಂಹ ಈ ವೇಳೆ ಕಾರವಾಗಿ ಪ್ರಶ್ನಿಸಿದರು.
ಇಸ್ಲಾಂ ಧರ್ಮ ಹುಟ್ಟಿದ್ದು ಮರುಭೂಮಿಯಲ್ಲಿ, ಮುಸ್ಲಿಂರಿಗೆ ಆಶ್ರಯ ಕೊಟ್ಟಿದ್ದು ನಾವು, ಈಗ ನಮ್ಮ ಭೂಮಿ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.