ಅಬಕಾರಿ ಇಲಾಖೆಯಲ್ಲಿ ಭಷ್ಟಾಚಾರವಾಗಿದ್ದರೆ ರಾಜಕೀಯ ಬಿಡುವೆ:ಪಿಎಂಗೆ‌ ಸಿಎಂ‌ ಸವಾಲು

ಮೈಸೂರು: ಅಬಕಾರಿ ಇಲಾಖೆಯಲ್ಲಿ ಒಂದು ಪೈಸ ಭಷ್ಟಾಚಾರ ಮಾಡಿದ್ರೆ ನಾನು ರಾಜಕೀಯ ಬಿಡುತ್ತೇನೆ,ಮೋದಿಯವರು ಪಿಎಂ ಸ್ಥಾನ ಬಿಡುವರೆ ಕೇಳಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,ಬಿಜೆಪಿಯವರು ಭ್ರಷ್ಟಾಚಾರ ಎಂದು ಸುಳ್ಳು ಹೇಳುತ್ತಿದ್ದಾರೆ.
ಪ್ರಧಾನಿಗಳು ಅದನ್ನೇ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಕೋವಿಡ್ ವೇಳೆ ನಡೆದ ಭ್ರಷ್ಟಾಚಾರ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ‌ ಎಂದು ಪ್ರಶ್ನಿಸಿದರು.

ಕರ್ನಾಟಕ ಅತಿ ದೊಡ್ಡ ರಾಜ್ಯ, ಇಲ್ಲಿ ನಾವು 136 ಸ್ಥಾನ ಗೆದಿದ್ದೇವೆ‌
ಹಾಗಾಗಿ ಮೋದಿ ನಾನು ಮತ್ತು ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ.
ಭ್ರಷ್ಟಾಚಾರ ನಡೆಯುವುದಕ್ಕೂ ಬಿಡುವುದಿಲ್ಲ ಎಂದು ಸಿಎಂ ಕಡಕ್ಕಾಗಿ ಹೇಳಿದರು.

ನನ್ನನ್ನು ದೇವೇಗೌಡರು ಸೊಕ್ಕು ಮುರಿಯಿತ್ತೀನಿ, ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಸರಿನಾ

ಜಮೀರ್ ಮತ್ತು ಕುಮಾರಸ್ವಾಮಿ ಕಿಥ್ ಅಂಡ್ ಕ್ಹಿನ್ ಫ್ರೆಂಡ್ಸ್,ಅವರವರ ನಡುವೆ ಏನೇನೋ ನಡೆಯುತ್ತಿರುತ್ತದೆ,ಆ ವಿಚಾರದ ಬಗ್ಗ ಜಮೀರ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.ಇದೆಲ್ಲ ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ.ನನ್ನನ್ನು ದೇವೇಗೌಡರು ಸೊಕ್ಕು ಮುರಿಯಿತ್ತೀನಿ, ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಸರಿನಾ ಎಂದು ಕೇಳಿದರು.

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆಗೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದು,ಈ ಪ್ರಸ್ತಾವನೇ, ಮಾತುಕತೆ ಯಾವುದು ಸರ್ಕಾರದ ಮುಂದೆ ಇಲ್ಲ, ಆದರೆ ಡಿ.ಕೆ ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ ಅವರನ್ನೇ ಕೇಳಿ ಎಂದು ತಿಳಿಸಿದರು.

ಮುಸ್ಲೀಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡುವ ವಿಚಾರ‌ ಕುರಿತು ಪ್ರತಿಕ್ರಿಯಿಸಿ,
ಈ ಬಗ್ಗೆ ಕೆಲವರು ಕೇಳಿದ್ದಾರೆ, ಮನವಿ ಕೊಟ್ಟಿದ್ದಾರೆ.ಆದರೆ ಈ ಬಗ್ಗೆ ಯಾವ ಚಿಂತನೆ ನಡೆದಿಲ್ಲ.ಬಿಜೆಪಿ ಸುಮ್ಮನೆ ಕೋಮುವಾದದ ಹಿನ್ನಲೆಯಲ್ಲಿ ಇದನ್ನ ವಿವಾದ ಮಾಡುತ್ತಿದೆ.
ಅವರಿಗೆ ಶಾಂತಿ ಸೌಹರ್ಧತೆ ಕೆಡಿಸುವುದೇ ಅವರ ಕೆಲಸ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ಇಡಿ, ಲೋಕಾಯುಕ್ತ ತನಿಖೆಗಳು ಸುಳ್ಳು ಕೇಸಿನ‌ ಮೇಲೆ ನಡೆಯುತ್ತಿರುವುದು ಇದರ ಬಗ್ಗೆ ನಾನು ಯಾಕೆ ಪ್ರತಿಕ್ರಿಯೆ ಕೊಡಲಿ ಎಂದು ಸಿಎಂ ಮರು ಪ್ರಶ್ನಿಸಿದರು.

ನಿಮ್ಮ ಪತ್ನಿಗೆ ನೋಟಿಸ್ ಬಂದಿದೆಯಾ ಎಂಬ ಪ್ರಶ್ನೆಗೆ ಗರಂ ಅದ ಸಿಎಂ ನಿಮ್ಮಗೆ ಏನಾದರೂ ಹೇಳಿದ್ದಾರಾ ಅಥವಾ ನೊಟೀಸ್ ಕೊಡಲಿ ಎಂಬುದು ನಿಮ್ಮ ಭಯಕೆನಾ ಎಂದು ಗರಂ ಆಗಿ ನುಡಿದರು ಸಿದ್ದು.

ಈ‌ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾದಾಗ ಒಂದು ಹಂತದಲ್ಲಿ ಸಿಎಂ ಜೋರು ಧ್ವನಿಯಲ್ಲಿ ಗದರಿ ಕೈ ಎತ್ತಿ ಹೊಡೆಯುವಂತೆ ಮುಂದಾದ ಪ್ರಸಂಗ ಕೂಡಾ ನಡೆಯಿತು.

ಮಾಜಿ ಸಚಿವ ನಾಗೇಂದ್ರ ಅವರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೇಳಿದ್ದಾರೆ.
ಉಪಚುನಾವಣೆ ಬಳಿಕ ನೋಡೊಣಾ ಎಂದು ಹೇಳಿದ್ದೇನೆ ಆದರೆ ಅದನ್ನೇ ಸಂಪುಟ ಪುನರಚನೆ ಎಂಬುದಾಗಿ ಹೇಳಬೇಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಜಯ ಗಳಿಸುತ್ತೇವೆ ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.