ಮೈಸೂರು: ಕನ್ನಡ ಭಾಷೆಯನ್ನು ಕರಗತ ಮಾಡಿಕೊಂಡ ವಿದ್ಯಾರ್ಥಿಗಳು ಬೇರೆ ಯಾವುದೇ ಭಾಷೆಯಲ್ಲಿ ಪಾಂಡಿತ್ಯ ಗಳಿಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್
ಹೇಳಿದರು.
ನಗರದ ಭೋಗಾದಿ ನ್ಯಾಯಾಂಗ ಬಡಾವಣೆಯಲ್ಲಿ ಚಾಮುಂಡೇಶ್ವರಿ ಕನ್ನಡ ಪರ ಸಂಘಟನೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾತೃಭಾಷೆ ಮೇಲೆ ಹಿಡಿತವಿಲ್ಲದವರು ಅನ್ಯ ಭಾಷೆ ಕರಗತ ಮಾಡಿ ಕೊಳ್ಳಲು ಕಷ್ಟವಾಗುತ್ತದೆ. ತಾತ್ಸಾರ ಭಾವನೆ ಬಿಟ್ಟು ಕನ್ನಡ ಭಾಷೆ ಕಲಿಕೆಗೆ ಪಾಲಕರು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್,
ಕೆಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,ನಂಜುಂಡಸ್ವಾಮಿ,ರಾಘವೇಂದ್ರ.ಡಿ ಪ್ರಕಾಶ್, ಸೋಮಣ್ಣ, ಲೋಕೇಶ್, ವಿಶ್ವಣ್ಣ, ನಾಗರಾಜು, ಮರಿಸ್ವಾಮಿ, ಮಂಜು, ಪುಟ್ಟಣ್ಣ, ಹರೀಶ್ ಗೌಡ, ಕೃಷ್ಣಪ್ಪ, ಮತ್ತಿತರರು ಪಾಲ್ಗೊಂಡಿದ್ದರು.