ಬೆಳಗಾವಿ: ತಾಕತ್ತಿದ್ದರೆ ನನ್ನ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಸವಾಲು ಹಾಕಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಬೈರತಿ ಸುರೇಶ್ ಮುಡಾದ ನೂರಾರು ದಾಖಲಾತಿಯನ್ನು ತಂದು ಸುಟ್ಟು ಹಾಕಿದ ಕುರಿತು ನಾನು ಧ್ವನಿ ಎತ್ತಿದೆ ಅದಕ್ಕಾಗಿ ಅವರು ನನ್ನ ಮೇಲೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಹಲವಾರು ಸಚಿವರು ಭ್ರಷ್ಟಾಚಾರದ ತನಿಖೆ ಎದುರಿಸಿದ್ದಾರೆ,ಆದರೆ ಶೋಭಾ ಕರಂದ್ಲಾಜೆ ಯಾವತ್ತಿಗೂ ಭ್ರಷ್ಟಾಚಾರ ಮಾಡಿಲ್ಲ, ಮಾಡೋದೂ ಇಲ್ಲ, ಮತ್ತು ನಮ್ಮ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುವವಳು ನಾನು ಎಂದು ಹೇಳಿದರು.
ಪೊನ್ನಣ್ಣನಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ, ಏನು ಮಾಡಲು ಹೊರಟ್ಟಿದ್ದೀರಿ ನಕಲಿ ದಾಖಲೆ ಸೃಷ್ಟಿಸಲು ಪೊನ್ನಣ್ಣನಿಗೆ ಜವಾಬ್ದಾರಿ ನೀಡಿದ್ದೀರಾ ಎಂದು ಕಾರವಾಗಿ ಪ್ರಶ್ನಿಸಿದರು.
ಪೊನ್ನಣ್ಣ ಇರುವುದು ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ, ಅವರಿಗೆ ನೀವು ವಿದ್ಯುತ್ ಇಲಾಖೆಯ ಜವಾಬ್ದಾರಿ ನೋಡಿ ಎಂದರೆ ಅದರಲ್ಲಿಯೂ ಭ್ರಷ್ಟಾಚಾರ ಮಾಡಲು ಹೋರಟ್ಟಿದೀರಿ ಎನ್ನುವ ಸಂಶಯ ಕಾಡುತ್ತಿದೆ. ನಿಮ್ಮಲ್ಲಿ ಯಾವ ದಾಖಲಾತಿ ಇದೆ ತಕ್ಷಣ ಬಹಿರಂಗ ಪಡಿಸಿ ಎಂದು ಶೋಬಾಕರಂದ್ಲಾಜೆ ಸವಾಲು ಹಾಕಿದರು.
ಬೈರತಿ ಸುರೇಶ್ ಮುಡಾ ದಾಖಲೆ ಸುಟ್ಟು ಹಾಕಿದ್ದು ಸತ್ಯ. ಅದಕ್ಕಾಗಿ ಈಗ ಇಡಿ, ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಸರಕಾರದ ಮೇಲೆ ಕಣ್ಣಿಟ್ಟಿದ್ದಾರೆ. ನಿಮಗೆ ತಾಖತ್ ಇದ್ದರೆ ನನ್ನ ಭ್ರಷ್ಟಾಚಾರ ಬಹಿರಂಗ ಮಾಡಿ ಎಂದು ಗುಡುಗಿದರು.
ನಮ್ಮ ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಇದೇ ವೇಳೆ ಸಚಿವೆ ವಿಶ್ವಾಸ ವ್ಯಕ್ತಪಡಿಸಿದರು.