ದಾಖಲೆ ಪರಿಶೀಲಿಸಿ ಅನುಕೂಲಸ್ತರ ಬಿಪಿಎಲ್ ಕಾರ್ಡ್ ರದ್ಧತಿಗೆ ಕ್ರಮ-ಪರಂ

ಬೆಂಗಳೂರು: ತೆರಿಗೆದಾರರು, ಸರ್ಕಾರಿ ನೌಕರರು, ಕಾರು ಹೊಂದಿರುವವರು,
3 ಎಕರೆ ಜಮೀನು ಇರುವವರೂ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಹಾಗಾಗಿ ದಾಖಲಾತಿ ಪರಿಶೀಲಿಸಿ ರದ್ಧತಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

ಅರ್ಹರ ಪಡಿತರ ಚೀಟಿ‌ಯನ್ನು ಸರ್ಕಾರ ರದ್ದುಪಡಿಸುತ್ತಿಲ್ಲ,ಈ ವಿಷಯವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ನವರೆ ಸ್ಪಷ್ಟಪಡಿಸಿದ್ದಾರೆ.ಆದರೂ ಸುಮ್ಮನೆ ಪುಕಾರು ಹಬ್ಬಿಸುತ್ತಾರೆ ಎಂದು ಬೇಸರ‌ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಸಿದ್ದರಾಮಯ್ಯನವರನ್ನು ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ ಹಾಗಾಗಿ ಅವರನ್ನು ಅಧಿಕಾರದಿಂದ ಇಳಿಸಲು ಡೇಟ್ ಫಿಕ್ಸ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ಆಪರೇಷನ್ ಕಮಲ ಮಾಡುವುದರಲ್ಲಿ ಎತ್ತಿದ ಕೈ ಎಂದು ಟೀಕಿಸಿದ ಪರಂ,ಆ ಬಗ್ಗೆ ದಾಖಲೆ ಸಿಕ್ಕರೆ ಖಂಡಿತಾ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.

ಆಪರೇಷನ್ ಕಮಲಾ ಬಗ್ಗೆ ಮುಖ್ಯ ಮಂತ್ರಿಗಳೇ ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ಸಿಎಂ ಸುಮ್ಮನೆ ಹೇಳುವುದಿಲ್ಲ ಸರಿಯಾಗೆ ಇರುತ್ತದೆ ಎಂದು ಪರಮೇಶ್ವರ್ ಉತ್ತರಿಸಿದರು.