ಮೈಸೂರು: ಚನ್ನಪಟ್ಟಣ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಸರತ್ತಿನ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಲೇವಡಿ ಮಾಡಿದ್ದಾರೆ.
ಒಬ್ಬರ ಕೈಯಲ್ಲಿ ಹಾರೆ ಇದೆ, ಮತ್ತೊಬ್ಬರ ಕೈಯಲ್ಲಿ ಗುದ್ದಲಿ ಇದೆ. ಯಾರಿಗೆ ಟಿಕೆಟ್ ಸಿಕ್ಕರೂ ಅವರ ಪಿಚ್ ಅನ್ನು ಅವರೆ ಅಗೆಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ದವರೊಂದಿಗೆ ಮಾತನಾ ಡಿದ ತನ್ವೀರ್ ಸೇಠ್, ರಾಷ್ಟ್ರ ರಾಜಕಾರಣವೇ ಬೇರೆ. ಚನ್ನಪಟ್ಟಣ ಪರಿಸ್ಥಿತಿಯೇ ಬೇರೆ. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಬಹಳ ವಿಶೇಷವಾಗಿದೆ ಎಂದು ಹೇಳಿದರು.
ಶಿಗ್ಗಾವಿ, ಸಂಡೂರು ಒಂದಾದರೆ, ಚನ್ನಪಟ್ಟಣ ಅತ್ಯಂತ ಕುತೂಹಲ ಮೂಡಿಸಿದೆ, ಈಗಾಗಲೇ ಅಭ್ಯರ್ಥಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಮೈತ್ರಿ ಅಭ್ಯರ್ಥಿ ಯಾರು, ಕಾಂಗ್ರೆಸ್‌ನಿಂದ ಯಾರು ಎಂಬುದು ಪ್ರಶ್ನೆ. ಡಿಸಿಎಂ ನಾನೇ ಅಭ್ಯರ್ಥಿ ಅಂತ ಹೇಳಿದ್ದಾರೆ. ಆದಾಗ್ಯೂ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್ ಅಭ್ಯರ್ಥಿ ಹಾಕುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ನಾಲ್ಕೈದು ದಿನದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಲಿದೆ, ಡಿ.ಕೆ ಸುರೇಶ್ ರಾಜಕೀಯವಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಪಕ್ಷಕ್ಕೆ ಇದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಶಿಗ್ಗಾವಿಯಲ್ಲಿ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿ ಅಂತ ನಾನು ಮನವಿ ಮಾಡಿದ್ದೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.
ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದು ಸಮುದಾಯ ಗುರಿಯಾಗಿ ಇಟ್ಟುಕೊಂಡು ಅಮಾಯಕರ ಮೇಲೆ ಕೇಸ್ ಹಾಕಿತ್ತು. ಆ ಕೇಸ್ ಈಗ ವಾಪಾಸ್ ಪಡೆದಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಶಾಸಕರು ಪ್ರಶ್ನಿಸಿದರು.
ಮುಡಾ ಅಧ್ಯಕ್ಷ ಸ್ಥಾನಕ್ಕೆ ಕೆ. ಮರಿಗೌಡ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಆರೋಗ್ಯ ದೃಷ್ಟಿಯಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದಾರೆ. ರಾಜೀನಾಮೆ ತನಿಖೆಗೆ ಒಳ್ಳೆಯದೇ. ಮರೀಗೌಡ ರಾಜೀನಾಮೆ ಯಿಂದ ಮೂಡಾ ತನಿಖೆಗೆ ಬಲ ಬಂದಿದೆ,ಮರಿಗೌಡ ಸಿಎಂ ಆಪ್ತರು. ಪಾರದರ್ಶಕ ತನಿಖೆಗೆ ಸಹಕಾರಿ ಆಗಲಿ ಅಂತ ರಾಜೀನಾಮೆ ಕೊಟ್ಟಿದ್ದಾರೆ. ಮುಡಾದಿಂದ ಸಿಎಂಗೆ ಆಂಟಿರುವ ಕಳಂಕ ದೂರು ಆಗತ್ತದೆ ಎಂದು ಇದೇ ವೇಳೆ ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
50:50 ಅನುಪಾತದಲ್ಲಿ ಮಂಜೂರಾಗಿರುವ ಎಲ್ಲಾ ಸೈಟ್ ವಾಪಸ್ ಪಡೆದು ಕೊಳ್ಳಿ, ಸಿಎಂ ಪತ್ನಿ 14 ಸೈಟ್ ವಾಪಾಸ್ ಕೊಟ್ಟ ರೀತಿಯಲ್ಲೆ ಅವತ್ತಿನ ಸಭೆಯಲ್ಲಿ ಮಂಜೂರಾದ ಉಳಿದ 161 ಸೈಟ್ ಗಳನ್ನು ಕೂಡ ವಾಪಾಸು ಪಡೆಯಿರಿ ಎಂದು ತನ್ವೀರ್ ಸೇಠ್ ಸಲಹೆ ನೀಡಿದ್ದಾರೆ.