ಮೈಸೂರು: ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಇಂದು ಪ್ರವಾಸೋದ್ಯಮ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೈಸೂರು ಸಂಗೀತ ಸುಗಂಧ ಉತ್ಸವ ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಭಾರತದ ಸಂಗೀತ ಪರಂಪರೆಗೆ ಕರ್ನಾಟಕ ಸಂಗೀತದ ಕೊಡುಗೆ ಮಹತ್ವವಾಗಿದ್ದು, ಜಾತಿ, ಧರ್ಮ ಹಾಗೂ ಭಾಷೆಯನ್ನು ಮೀರಿ ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.
ಇಂದು ಸಂಗೀತ ಸುಗಂಧ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿರುವ ಮುಖ್ಯ ಉದ್ದೇಶ, ಇಲ್ಲಿನ ವಿಜಯ ನಗರ ಸಾಮ್ರಾಜ್ಯದಂತಹ ರಾಜ ಮನೆತನಗಳ ಒಡೆಯರು ಸಂಗೀತಕ್ಕೆ ಹಾಗೂ ಅದರ ಬೆಳವಣಿಗೆಗೆ ನೀಡುರುವ ಪ್ರೋತ್ಸಾಹವಾಗಿದೆ. ಅಲ್ಲದೆ ಮೈಸೂರು ಸಂಗೀತದ ನಾಡು ಹಾಗೆಯೇ ಚಂದನದ ನಾಡು ಆಗಿದೆ. ಹಾಗಾಗಿ ಇಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿ ಆ ಕಾರ್ಯಕ್ರಮದಲ್ಲಿ ದಾಸ ಸಂಗೀತದ ಬಗ್ಗೆ ಮಾತಾಡವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಕರ್ನಾಟಕ ಸಂಗೀತವು ಪ್ರವರ್ಧಮಾನಕ್ಕೆ ಬಂದಿತು. ಈ ಸಮಯದಲ್ಲಿ ಕರ್ನಾಟಿಕ್ ಸಂಗೀತದ ಪಿತಾಮಹ ಎಂದು ಕರೆಯಲ್ಪಡುವ ಸಂತ ಪುರಂದರದಾಸರು ಲಕ್ಷಾಂತರ ಕೀರ್ತನೆಗಳು, ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಪಾಠಗಳನ್ನು ಸಹ ರೂಪಿಸಿದ್ದಾರೆ ಎಂದು ನಿರ್ಮಲಾ ಹೇಳಿದರು
ಪುರಂದರ ದಾಸರ ನಂತರ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್ ಮತ್ತು ಶ್ಯಾಮ ಶಾಸ್ತ್ರಿ ಈ ಮೂವರು ಸಂಯೋಜಕರು ಸಮಕಾಲೀನರಾಗಿದ್ದರು. ಅವರ ಸಂಯೋಜನೆಗಳಿಂದ ಕರ್ನಾಟಿಕ್ ಸಂಗೀತ ಸಂಗ್ರಹವನ್ನು ಶ್ರೀಮಂತಗೊಳಿಸಿದರು. ಅವರು ಮಧುರ ಸೌಂದರ್ಯ, ಲಯಬದ್ಧ ಮತ್ತು ಭಕ್ತಿಯ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ತಿಳಿಸಿದರು.
ಪುರಂದರ ದಾಸರು ಭಿಕ್ಷೆಗಾಗಿ ಮನೆ ಮನೆಗೆ ತೆರಳುವಾಗ ರಚಿಸಿದಂತಹ ಕೀರ್ತನೆಗಳು ಇಂದು ಎಲ್ಲರನ್ನು ತಲುಪಿದೆ, ಅವರ ಪ್ರತಿಯೊಂದು ಕೀರ್ತನೆಯಲ್ಲಿಯೂ ಪುರಂದರ ವಿಠ್ಠಲನನ್ನು ನೆನೆಯುತ್ತಾರೆ. ಕನ್ನಡ ಸಂಗೀತ ಲೋಕದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಕರ್ನಾಟಿಕ್ ಸಂಗೀತದ ಬಗ್ಗೆ ತಿಳಿಯುವಾಗ ದಾಸ ಸಂಗೀತವು ಪ್ರಮುಖವಾದದ್ದಾಗಿದ್ದು, ಪುರಂದರರ ನಂತರ ಬಂದಂತಹ ಕನಕದಾಸರು, ಹರಿದಾಸರು ಹಾಗೂ ಇನ್ನಿತರರು ಅದನ್ನು ಬೆಳೆಸುವಲ್ಲಿ ತಮ್ಮನ್ನು ತಾವು ಅರ್ಪಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಇಂದು ಎಲ್ಲಾ ಭಾಷೆ, ಪ್ರದೇಶವನ್ನು ಮೀರಿ ಜನರನ್ನು ತಲುಪಿದೆ ಎಂದು ಹೇಳಿದರು.
ಜನರನ್ನು ಒಂದು ಗೂಡಿಸಿ ಎಲ್ಲರೂ ಒಂದೇ ಎಂದು ಸಾರುವಲ್ಲಿ ದಾಸರು, ಬಸವಣ್ಣ ಸೇರಿದಂತೆ ಇನ್ನಿತರರು ಶ್ರಮಿಸಿದ್ದಾರೆ. ಸಮ ಸಮಾಜವನ್ನು ನಿರ್ಮಿಸುವಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ಇಂದು ಮೈಸೂರಿನ ಹಲವಾರು ಸಂಗೀತ ದಿಗ್ಗಜರರು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಗೋಪಿ ಅವರು ಮಾತನಾಡಿ, ಕಳೆದ ಬಾರಿ ಅಂದ್ರ ಪ್ರದೇಶದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವರ್ಷ ಕರ್ನಾಟಕದ ಮೈಸೂರಿನಲ್ಲಿ ಮಾಡಲಾಗುತ್ತಿದ್ದೆ. ಕರ್ನಾಟಕ ತೆಲಂಗಾಣ, ಕೇರಳ ಹಾಗೂ ಇನ್ನಿತರ ರಾಜ್ಯಗಳು ತನ್ನದೇ ಆದ ಸಂಗೀತಾ ಪರಂಪರೆಯನ್ನು ಹೊಂದಿದ್ದು, ಕರ್ನಾಟಕದ ದಾಸ ಸಂಗೀತವು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಭಾರತೀಯ ಚಿತ್ರರಂಗದಲ್ಲಿ ಕರ್ನಾಟಿಕ್ ಸಂಗೀತದ ಪ್ರಭಾವವನ್ನು ನೋಡುವುದಾದರೆ ಶಂಕರನ್, ಎಸುದಾಸ್ ಅವರ ಕೊಡುಗೆ ಅಪಾರವಾಗಿದ್ದು, ಕರ್ನಾಟಿಕ್ ಸಂಗೀತದ ಬಗ್ಗೆ ಅರಿವೇ ಇಲ್ಲದ ಎಸ್ ಪಿ ಬಿ ಅವರು ಕರ್ನಾಟಿಕ್ ಸಂಗೀತದ ಲೋಕದಲ್ಲಿ ಮಾಡಿದ ಸಾಧನೆ ಅವಿಸ್ಮರಣೀಯ. ಎಸ್ ಜಾನಕಿ, ಸುಶೀಲ, ಕೆ ಎಸ್ ಚಿತ್ರ, ಜಯಚಂದ್ರನ್ ಸೇರಿದಂತೆ ಹಲವಾರು ಸಂಗೀತಾ ದಿಗ್ಗಜರರು ಕರ್ನಾಟಿಕ್ ಸಂಗೀತದಲ್ಲಿ ಪರಿಣಿತರಾಗಿದ್ದು, ಅವರು ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇನ್ನೂ ಮಲಯಾಳಂ ಸಿನೆಮಾದಲ್ಲಿ ಕರ್ನಾಟಿಕ್ ಸಂಗೀತವು ಒಂದು ಅಲೆಯನ್ನೇ ಸೃಷ್ಟಿ ಮಾಡಿತ್ತು ಎಂದು ಬಣ್ಣಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಸಿ ಮಹದೇವಪ್ಪ ನವರು ಮಾತನಾಡಿ, ಸುಗಂಧ ಸಂಗೀತಾ ಎಂಬುದು ಅವಿಸ್ಮರಣೀಯ ಕಾರ್ಯಕ್ರಮವಾಗಿದ್ದು, ಧರ್ಮ ಮತ್ತು ಜಾತಿಯನ್ನು ಮೀರಿದ ಸಂಗೀತವು ಜನರ ಮನಸ್ಸನ್ನು ಸೇರಬೇಕು ಎಂದು ಹೇಳಿದರು.
ಕ್ರಿಸ್ತ ಶಕ 12 ಮತ್ತು 14ನೆೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಆಳ್ವಿಕೆಯ ಸಮಯದಲ್ಲಿ ಸಂಗೀತಾ ಕಲೆ ಉಕೃಷ್ಟವಾಗಿತ್ತು. ಕೀರ್ತನೆ ಮತ್ತು ಭಜನೆಗಳ ಮೂಲಕ ಪುರಂದರದಾಸರು ಕರ್ನಾಟಕದಲ್ಲಿ ದಾಸ ಸಾಹಿತ್ಯವನ್ನು ಬೆಳಕಿಗೆ ತಂದರು. ಇವರ ನಂತರದಲ್ಲಿ ಕನಕದಾಸರ ಕೀರ್ತನೆಗಳು ದಾಸಸಾಹಿತ್ಯದಲ್ಲಿ ಕರ್ನಾಟಕ ಸಂಗೀತದಲ್ಲಿ ಪ್ರಖ್ಯಾತಿ ಪಡೆಯಿತು ಎಂದು ತಿಳಿಸಿದರು.
ಮೈಸೂರು – ಕೊಡಗು ಲೋಕಸಭಾ ಸದಸ್ಯರಾದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ, ಮೈಸೂರಿನಲ್ಲಿ ಸಂಗೀತ ಸುಗಂಧ ಉತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಇಂದಿಗೂ ಮೈಸೂರಿನಲ್ಲಿ ಸಂಗೀತಾ ಪರಂಪರೆ ಮುಂದುವರೆಯುತ್ತಿದೆ. ರಾಜರ ಕಾಲದಿಂದಲೂ ಕರ್ನಾಟಿಕ್ ಸಂಗೀತಾ ಪ್ರವರ್ಧಮಾನದಲ್ಲಿದ್ದು, ದಾಸರ ಸಂಗೀತಾ ಪ್ರಮುಖವಾಗಿದೆ. ವಿಜಯ ನಗರ ಸಾಮ್ರಾಜ್ಯದ ಕಾಲದಿಂದಲೂ ಮುಂದುವರೆಯುತ್ತಾ ಬಂದಿದೆ. ಕರ್ನಾಟಿಕ್ ಸಂಗೀತ ಲೋಕಕ್ಕೆ ಪುರಂದರ ದಾಸರು ನೀಡಿದ ಕೊಡುಗೆ ಗಣನೀಯ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ದಾಸರ ಜನಪ್ರಿಯ ಕೀರ್ತನೆಯನ್ನು ಹಾಡಿದ ನಿರ್ಮಲಾ ಸೀತಾರಾಮನ್ :
ಸುಗಂಧ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತದ ಪಿತಾಮಹರಾದ ಪುರಂದರದಾಸರ ಜನಪ್ರಿಯ ಕೀರ್ತನೆಗಳಾದ ರಾಗಿ ತನ್ನಿರಿ ಭಿಕ್ಷೆಗೆ ರಾಗಿ ತನ್ನಿರಿ, ಭೋಗ್ಯರಾಗಿ, ಯೋಗ್ಯರಾಗಿ, ಭಾಗ್ಯವಂತರಾಗಿ, ನೀವು ಭಿಕ್ಷೆಗೆ ರಾಗಿ ತನ್ನಿರಿ. ಕೀರ್ತನೆಯನ್ನು ಹಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಸುಮನ್ ಬಿಲ್ಲಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.