1 ಟರ್ಮ್ ಫೀಸ್ ಖಾಸಗಿ ಶಾಲೆ ಪಡೆಯಬೇಕು -ಸಚಿವ ಸುರೇಶ್ ಕುಮಾರ್

ಮೈಸೂರು: ಕೇವಲ ಒಂದು ಟರ್ಮ್ ಫೀಸ್ ಮಾತ್ರ ಖಾಸಗಿ ಶಾಲೆ ಪಡೆಯಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಒಂದು ಟರ್ಮ್ ಫೀಸ್ ಮಾತ್ರ ಖಾಸಗಿ ಶಾಲೆ ಪಡೆಯಬೇಕು. ಹಾಗೊಮ್ಮೆ ಸಮಸ್ಯೆ ಆದರೆ ಡಿಡಿಪಿಐ, ಬಿಇಓ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಅವರಿಗೆ ಈಗಾಗಲೇ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೆÇೀಷಕರಿಗೆ ಇದರಿಂದ ಸಮಸ್ಯೆ ಆದರೆ ಬಿಇಒ ಸಂಪರ್ಕಿಸಿ ಎಂದು ಸಚಿವರು ತಿಳಿಸಿದರು.
ಸೆ. 21ರಿಂದ ಕೇವಲ ಶಾಲೆ ತೆರೆಯಲಿದೆ. ತರಗತಿ ಪ್ರಾರಂಭ ಇಲ್ಲ ಎಂದು ಅವರು ಹೇಳಿದರು.
ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಯತ್ತ ಮಕ್ಕಳು ಬರುತ್ತಿದ್ದಾರೆ. ರಾಜ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ. ಸರ್ಕಾರಿ ಶಾಲೆಯತ್ತ ಪೆÇೀಷಕರು, ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಎಷ್ಟೇ ಮಕ್ಕಳು ಬಂದರೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆ ಟಿಸಿ ಕೊಡದಿದ್ದಲ್ಲಿ ಬಿಇಒ ಅವರಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯತೆಗಳು ಇಲ್ಲ. ಶೇ. 100ಕ್ಕೆ ನೂರಷ್ಟು ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆಂದರು.