ಪ್ರೇಮಿಗಳ ಅಡ್ಡೆ ಶಂಕರದೇವರ ಬೆಟ್ಟ !

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಇತಿಹಾಸ ಧಾರ್ಮಿಕತೆ ಹಾಗೂ ಪಾವಿತ್ರ್ಯತೆಯ ಸಂಕೇತವಾದ ದೇವಾಲಯ  ಪ್ರೇಮಿಗಳ ಅಡ್ಡೆಯಾಗುತ್ತಿದೆ.

ಹೌದು ಇದು ನಿಜ. ಚಾಮರಾಜನಗರ ತಾಲ್ಲೋಕಿನ ಸಂತೇಮರಳ್ಳಿ ಠಾಣೆ ವ್ಯಾಪ್ತಿಗೆ ಸೇರಿದ ಮಂಗಲ ಗ್ರಾಮದ ಬಳಿ ಇರುವ ಶಂಕರದೇವರ ಬೆಟ್ಟ ಇದೀಗ ಪ್ರೇಮಿಗಳ ಅಡ್ಡಿಯಾಗಿಬಿಟ್ಟಿದೆ.

ಇದರಿಂದ ಇಲ್ಲಿಗೆ ಬರುವ ಭಕ್ತರಿಗೆ ಬಹಳ ಮುಜುಗರವಾಗುತ್ತಿದೆ.

ಆದರೂ ನಮಗೇಕೆ ಇಲ್ಲದ ಉಸಾಬರಿ ಎಂದುಕೊಂಡು ಮೌನವಹಿಸಿ ತೆರಳುತ್ತಾರೆ.

ನಿರ್ಜನ ಪ್ರದೇಶದಲ್ಲಿ ಪ್ರೇಮಿಗಳು ತಮ್ಮದೇ  ಲೋಕದಲ್ಲಿ ತೇಲುತ್ತಿರುತ್ತಾರೆ ಯಾರ ಭಯವೂ ಇದ್ದಂತಿಲ್ಲ.

ಪೊಲೀಸರು ಎಚ್ಚರ ವಹಿಸಬೇಕಿದೆ. ಪ್ರೇಮಿಗಳಿಗೆ ಬುದ್ದಿ ಹೇಳಿ ಕಳಿಸದಿದ್ದರೆ ಕಷ್ಟ.

ಏನಾದರೂ ಯಾಮಾರಿದರೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಕುಕೃತ್ಯ ತರಹ ಇಲ್ಲಿ ನಡೆದರೂ ನಡೆಯಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೆಲ್ಲ ಪರಿಶೀಲಿಸಬೇಕಾದ ಪೊಲೀಸರು ನಮಗೇಕೆ ಅಂತ ಮೌನವಾಗಿದ್ದಾರೆ.

ಮೈಸೂರಿನಲ್ಲಿ ಅನಾಹುತ ನಡೆದಾಗ ಜಿಲ್ಲಾ ಎಸ್ಪಿ ದಿವ್ಯ ಅವರು ಶಂಕರದೇವರ ಬೆಟ್ಟಕ್ಕೆ ಪೊಲೀಸ್ ಭದ್ರತೆ ಒದಗಿಸಿದ್ದರು. ಆ ಪ್ರಕರಣ ಮುಕ್ತಾಯವಾದ ನಂತರ ಮತ್ತೇನು ನಡೆಯಲಾರದು ಅಂತ ಭದ್ರತೆ ಕೈ ಬಿಟ್ಟಿದ್ದಾರೆ.

ಶಂಕರದೇವರ ಬೆಟ್ಟದಲ್ಲಿ ನಡೆಯುತ್ತಿರುವ ಪ್ರೇಮದಾಟಗಳು ಇಲ್ಲಿನ ಸ್ಥಳೀಯರಿಗೆ  ಸಾಮಾನ್ಯವಾಗಿಬಿಟ್ಟಿವೆ.

ನಾವು ಪ್ರಶ್ನಿಸಿದರೆ ತಪ್ಪಾಗುತ್ತದೆ ಕಾನೂನು ಇದೆ, ಪೊಲೀಸರು ಇದ್ದಾರೆ.ಅವರೆ ಕೇಳಲಿ ಅಂತ ಸುಮ್ಮನಿದ್ದೇವೆ. ಆದರೆ ಅವರೂ ಕೇಳದಿದ್ದಾಗ ಪುಂಡಪೋಕರಿಗಳಿಗೆ ಪ್ರೇಮಿಗಳು ಬಲಿಯಾದರೆ ಪೊಲೀಸ್ ಇಲಾಖೆಯೆ ತಲೆದಂಡ ತೆರ ಬೇಕಾಗುತ್ತದೆ. ಅದೂ ಅನಿವಾರ್ಯ ಕೂಡ ಎನ್ನುತ್ತಾರೆ ಇಲ್ಲಿನ ಜನ.

ಅನಾಹುತ ಆಗುವ ಮುನ್ನ ಪೊಲೀಸರು ಎಚ್ಚೆತ್ತುಕೊಂಡಾರೆಯೇ ಕಾದು ನೋಡಬೇಕಿದೆ.