ವಾರಣಾಸಿಯಲ್ಲಿ ಇಡೀ ರಾತ್ರಿ ಅಭಿವೃದ್ಧಿ ಕಾರ್ಯ ಪರಿಶೀಲಿಸಿದ ಮೋದಿ

ಉತ್ತರ ಪ್ರದೇಶ ‌: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇಡೀ ರಾತ್ರಿ ಅಭಿವೃದ್ಧಿ‌ ಕಾರ್ಯಗಳನ್ನು ಪರಿಶೀಲಿಸಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಧ್ಯರಾತ್ರಿಯವರೆಗೆ ಸಭೆ ನಡೆಸಿದರು.

ಇಡೀ ದಿನ ಕ್ರಿಯಾಶೀಲರಾಗಿದ್ದ ಪ್ರಧಾನಿ ಉತ್ತರ ಪ್ರದೇಶದ ತಮ್ಮ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮಧ್ಯರಾತ್ರಿವರೆಗೂ ಪರ್ಯಟನೆ ನಡೆಸಿದರು.

ಕಾಶಿಯಲ್ಲಿನ ಪ್ರಮುಖ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಮೋದಿ ಈ ಪವಿತ್ರ ನಗರದಲ್ಲಿ ಅತ್ಯುತ್ತಮ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ಹೇಳಿದ್ದಾರೆ.

ಬನಾರಸ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಪ್ರಧಾನಿ ನಾವು ರೈಲು ಸಂಪರ್ಕವನ್ನು ಹೆಚ್ಚಿಸಲು ಕಾರ್ಯ ನಿರ್ವಹಿಸುತ್ತಿದ್ದೇವೆ ಮತ್ತು ಸ್ವಚ್ಛ,ಆಧುನಿಕ ಹಾಗೂ ಪ್ರಯಾಣಿಕ ಸ್ನೇಹಿ ರೈಲು ನಿಲ್ದಾಣಗಳಿರಬೇಕು ಎಂದು ತಿಳಿಸಿದ್ದಾರೆ.

ವಾರಾಣಸಿ ಭೇಟಿಯ 2ನೇ ದಿನವಾದ ಮಂಗಳವಾರ ಪ್ರಧಾನಿಯವರು ವಾರಾಣಸಿಯ ಹೊರವಲಯದಲ್ಲಿರುವ ಪ್ರಸಿದ್ಧ ದೇವಾಲಯ ಸಮುಚ್ಚಯದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬಳಿಕ ದೆಹಲಿಗೆ ಹಿಂದಿರುಗಿದರು.