ರಾಮನಗರ: ನೇಣು ಬಿಗಿದ ಸ್ಥಿತಿಯಲ್ಲಿ ಚಿಲುಮೆ ಮಠದ ಸ್ವಾಮೀಜಿಯವರ ಮೃತ ದೇಹ ಪತ್ತೆಯಾಗಿದೆ ಅವರ ಸಾವು ಅನುಮಾನ ಮೂಡಿಸಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲುರು ಗ್ರಾಮದ ಬಳಿ ಇರುವ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿಗಳು(52) ಸೋಮವಾರ ಬೆಳಿಗ್ಗೆ ಮೃತರಾಗಿದ್ದು, ಅನುಮಾನಕ್ಕೆಡೆಮಾಡಿದೆ.
ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ದೊರಕಿದೆ.
ಸ್ವಾಮೀಜಿಯವರ ಸಾವು ನಿಗೂಢ ವಾಗಿರುವ ಕಾರಣ ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.