KSP ಆ್ಯಪ್ ಚಾಮರಾಜನಗರದಲ್ಲಿ ನಿಷ್ಕ್ರಿಯ ಆಯ್ತೆ!?

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ರಾಜ್ಯ ಪೊಲೀಸ್ ಇಲಾಖೆ ತನ್ನ ಎಲ್ಲಾ ಚಟುವಟಿಕೆಗಳನ್ನು ದಕ್ಷತೆಯಿಂದ ನಿರ್ವಹಿಸಲು ಏನೇ ಯೋಜನೆ ರೂಪಿಸಿದರೂ ಅದು ಹೊಸದರಲ್ಲಿ ಅಗಸ ಗೋಣೀನ ಎತ್ತಿ,ಎತ್ತೀ ಒಗೆದಂತೆ ಅಷ್ಟೆ..

ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತ್ ಅಂದಾಗೆ ಆಗಿ ಬಿಡುತ್ತಿದೆ‌.   

ಹೌದು!ಇದು ಸತ್ಯ. ರಾಜ್ಯ ಪೊಲೀಸ್ ಇಲಾಖೆ ದೂರು ಲಗತ್ತಿಸಲು ಜಾರಿಗೆ ತಂದ KSP ಆ್ಯಪ್ ಚಾಮರಾಜನಗರದಲ್ಲಿ ಪ್ರಚಾರ ಇಲ್ಲದೆ ನಿಷ್ಕ್ರಿಯವಾಗುತ್ತಿದೆ. ಜೊತೆಗೆ ನಿದ್ದೆಗೂ ಜಾರಿದೆ ಎಂದರೆ ತಪ್ಪಾಗಲಾರದು.

ದೂರು ಲಗತ್ತಿಸುವವರ ಸಂಖ್ಯೆಯೇ ಕಡಿಮೆ. ಒಂದು ವೇಳೆ ಯಾರಾದರೂ ದೂರು ಲಗತ್ತಿಸಿದರೂ ಠಾಣಾದಿಕಾರಿಗಳು ಕರೆದು ವಿಚಾರಣೆ ಮಾಡೊಲ್ಲ…

ಮೊದ ಮೊದಲು  KSP ಆ್ಯಪ್  ಸಕ್ರಿಯವಾಗಿತ್ತು. ಅಕ್ರಮ ಬಗ್ಗೆ ದೂರು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಜೊತೆಗೆ ಅಗತ್ಯ ಇರುವ  ದಾಖಲೆ ಕೊಡುತ್ತಿದ್ದರು‌.

ಜೊತೆಗೆ  ಬೆಂಗಳೂರು ಕೆಎಸ್ಪಿ ಕಚೇರಿಯಿಂದಲೂ ದೂರುದಾರರಿಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು.  ಆದರೆ ಈಗ ತಿಂಗಳಾದರೂ ದೂರಿಗೆ ಚಾಮರಾಜನಗರದಲ್ಲಿ ಪ್ರತಿ ಸ್ಪಂದನೆ ಸಿಗುತ್ತಿಲ್ಲ. ವಿಚಾರಣೆ ಇನ್ನೆಲ್ಲಿ ಬಂತು.

ನಿರ್ದಿಷ್ಟ ಮಾಹಿತಿ ಪಡೆಯಲು ಸಂಬಂಧಿಸಿದ ಅದಿಕಾರಿಗಳು ಸಿಗೊಲ್ಲ…ಹಿರಿಯ ಅದಿಕಾರಿ ಎಸ್ಪಿ ಆದವರು ಇದರ ಬಗ್ಗೆ ಮಾತಾಡೋದೆ ಇಲ್ಲ.ಎಲ್ಲವೂ ಮೌನ…ಮೌನ….

ಯಾವುದಾದರೂ ಪತ್ರಿಕಾಗೋಷ್ಠಿಯಲ್ಲಿ ಇದರ ಬಗ್ಗೆ ಪ್ರಶ್ನೆ ಕೇಳಿದರೆ ಘೋಷ್ಠಿಗೆ ಸಂಬಂದಿಸಿದ್ದನ್ನ ಮಾತ್ರ ಕೇಳಿ ಅಂತಾರೆ.

ಮತ್ತೆ KSP ಆ್ಯಪ್ ಗೆ ಜೀವ ಬಂದೀತೆ ಎಂದು ಇಲ್ಲಿನ ಜನ ಪ್ರಶ್ನಿಸುತ್ತಿದ್ದರೆ.ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಏನು ಹೇಳುತ್ತಾರೊ ಕಾದುನೋಡಬೇಕಿದೆ.