ಜೆಡಿಎಸ್ ಜಿಲ್ಲಾ ಖಜಾಂಚಿ ಪುತ್ರ ಆತ್ಮಹತ್ಯೆ

ಮೈಸೂರು:  ಜೆಡಿಎಸ್  ಜಿಲ್ಲಾ ಖಜಾಂಚಿ ಬೆಳವಾಡಿ ಶಿವಮೂರ್ತಿಯವರ ಪುತ್ರ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮರಟಿಕ್ಯಾತನಹಳ್ಳಿಯಲ್ಲಿ ನಡೆದಿದೆ.

ಬೆಳವಾಡಿ ಶಿವಮೂರ್ತಿ ಪುತ್ರ ಪ್ರದೀಪ್ (32) ಆತ್ಯೆಗೆ ಶರಣಾಗಿರುವ ದುರ್ದೈವಿ.

ಗುರುವಾರ ರಾತ್ರಿ ಮರಟಿಕ್ಯಾತನಹಳ್ಳಿಯ ಅಪಾರ್ಟ್‍ಮೆಂಟ್ ನಲ್ಲಿ  ಈತ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯಬ್ಬರನ್ನು ಪ್ರೀತಿಸುತ್ತಿದ್ದ ಈತ ಅವರೊಂದಿಗೆ ಅನ್ಯೋನ್ಯ ವಾಗಿದ್ದ ಎಂದು ತಿಳಿದು ಬಂದಿದೆ.

ಗರ್ಭಿಣಿಯಾದ ಅಧಿಕಾರಿ‌ ಪ್ರದೀಪ್ ನನ್ನು ವಿವಾಹವಾಗುವಂತೆ ಒತ್ತಡ ಹೇರಿದ್ದರೆಂದೂ  ಮನೆಯವರ ಅನುಮತಿ ಸಿಕ್ಕದ ಕಾರಣಕ್ಕೆ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆ.

ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರದೀಪ್ ತಾಯಿ ಭಾಗ್ಯ ಶಿವಮೂರ್ತಿ ಕೂಡ ಈ ಹಿಂದೆ  ಮೈಸೂರು ಜಿ.ಪಂ ಅಧ್ಯಕ್ಷರಾಗಿದ್ದರು.