ಮೈಸೂರು: ವಿಜಯ ನಗರದಲ್ಲಿರುವ ರೇಣುಕಾ ಇನ್ನೋವೇಟಿವ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ರೇಣುಕ ಎಸ್ ಸಿ ಅವರ ಮೇಲೆ ಹಿಂದೆ ಹಲ್ಲೆ ನಡೆದಿದ್ದಲ್ಲದೆ. ಕೊಲೆ ಬೆದರಿಕೆ ಬಂದಿದೆ ಎಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗ ಉಪನಿರ್ದೇಶಕರ ಕಛೇರಿ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಇವರು ಪೊಲೀಸ್ ಆಯುಕ್ತರಲ್ಲಿ ರೇಣುಕಾ ಅವರು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಲು ಸೂಕ್ತ ಭದ್ರತೆಯನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಅಲ್ಲದೆ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಅವರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನನ್ನೊಂದಿಗೆ ಸಮಸ್ಯೆ ಹೇಳಿದ್ದಾರೆ, ಕೆಲ ಉಪನ್ಯಾಸಕರು ಮೂರು ಗಂಟೆ ಪಾಠ ಮಾಡುತ್ತಾರೆ ಅದು ಬಿಟ್ಟರೆ ಇನ್ನೇನೂ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ ಅದನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಮತ್ತೆ ಉಪನ್ಯಾಸಕರ ಸಭೆ ಕರೆದು ಯಾಕೆ ಒಂದೇ ದಿನ ಮೂರ್ನಾಲ್ಕು ಗಂಟೆ ಪಾಠ ಮಾಡುತ್ತೀರಿ, ಸೈನ್ಸ್ ಗೆ ಒಂದೇ ದಿನ ಅಷ್ಟು ಪಾಠ ಮಾಡಿದರೆ ಕಷ್ಟ ಆಗತ್ತಲ್ಲ ಎಂದು ಹೇಳಿದ್ದೇನೆ ಎಂದರು.
ಅದಕ್ಕೆ ಉಪನ್ಯಾಸಕರು ಪರೀಕ್ಷೆ ಬಂತಲ್ಲ, ಸಿಲೆಬಸ್ ಹಿಂದುಳಿದಿತ್ತು. ಅದಕ್ಕೆ ಆ ತರ ತಗೋತಿದ್ದೆ ಅಂದರು. ಆ ತರ ತಗೋಬೇಡಿ. ಒಂದು ದಿನದಲ್ಲಿ ಎರಡು ಗಂಟೆ ತಗೊಳಿ. ಕಂಟಿನ್ಯೂ ತಗೋಬೇಡಿ ಒಂದು ಗಂಟೆ ತಗೊಂಡು ಗ್ಯಾಪ್ ಬಿಟ್ಟು ಮತ್ತೆ ಒಂದು ಗಂಟೆ ತಗೊಳಿ ಅಂತ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ರೇಣುಕಾ ಮಾತನಾಡಿ ಫಂಡ್ ದುರುಪಯೋಗ ಪಡಿಸಿಕೊಂಡಿದ್ದಾರೆಂದು ನನ್ನ ಮೇಲೆ ಕೆಲವರು ಆರೋಪ ಮಾಡಿದ್ದಾರೆ. 12ನೇ ತಾರೀಖು ಪ್ರಾಂಶುಪಾಲರ ಸ್ಥಾನಕ್ಕೆ ಮತ್ತು ಟ್ರಸ್ಟಿಗೆ ರಾಜೀನಾಮೆ ಕೊಟ್ಟಿದ್ದೇನೆಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂದು ಬೇಸರ ತೋಡಿಕೊಂಡರು.
ನಾನು ಏನಾದರೂ ತಪ್ಪಿತಸ್ಥೆ ಅಂತಿದ್ದರೆ ನನಗೆ ಶಿಕ್ಷೆ ಕೊಡಲಿ, ನಾನು ಸ್ವೀಕರಿಸಲು ಸಿದ್ಧಳಿದ್ದೇನೆ. ನಾನು ಇಲ್ಲಿ ನಿಂತಿರೋದು ಪಾಠಕ್ಕೆ, ರಾಜಕೀಯ ಮಾಡಲು ಅಲ್ಲ ಎಂದು ರೇಣುಕ ಕಡಕ್ ಆಗಿ ಹೇಳಿದರು.
ಉಪನ್ಯಾಸಕರ ಸಂಘಕ್ಕೆ ಹೋಗಿ ದೂರು ನೀಡುತ್ತೇನೆ,ನನಗೂ ಗೌರವವವಿದೆ. ನನ್ನ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ತಿಳಿಸಿದರು.