ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ವರದಕ್ಷಿಣಿ ಕಿರುಕುಳದಿಂದ ಕೊಲೆ ಮಾಡಿರಬಹುದಾದ ಶಂಕೆಯಿಂದ ದೂರು ನೀಡಿದ್ದರೂ ಒಬ್ಬರನ್ನ ಬಂಧಿಸಿ ಉಳಿದವರ ಬಂಧಿಸಲು ಮೀನಾಮೇಷ ಎಣಿಸುತ್ತಿರುವುದಕ್ಕೆ ಆಕ್ರೋಶಗೊಂಡು ಪೆÇೀಷಕರು ನಗರದ ಡಿವೈಸ್ಪಿ ಕಚೇರಿ ಮುಂಭಾಗ ಪ್ರತಿಭಟಿಸಿದರು.

ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ದೇವಪ್ಪನವರ ಮಗಳು ದಿವ್ಯ ಪಕ್ಕದ ಗ್ರಾಮವಾದ ಉಡಿಗಾಲ ಗ್ರಾಮದ ಜಯಶಂಕರ್ ಜೊತೆ ಮದುವೆ ಮಾಡಿಕೊಟ್ಟಿದ್ದರು.

ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಎರಡು ಲಕ್ಷ ರೂ ನಗದು, ಚಿನ್ನಾಭರಣ, ಬೆಳ್ಳಿಯನ್ನು ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.

ನಿರುದ್ಯೋಗಿಯಾಗಿದ್ದ ಪತಿ ಜಯಶಂಕರ್ ಬಿಜೆನಸ್ ಮಾಡಲು ತವರು ಮನೆಯಿಂದ ಹಣ ತರುವಂತೆ ಹೆಂಡತಿಯನ್ನು ಪೀಡುಸುತ್ತಿದ್ದ ಎಂದು ಮೃತ ದಿವ್ಯ ಕುಟುಂಬಸ್ಥರು ಆರೋಪಿಸಿ, ಇದು ಗಂಡನ ಮನೆಯವರು ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ ಎಂದು ಚಾಮರಾಜನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಈ ಪ್ರಕರಣದಲ್ಲಿ ಮೃತ ದಿವ್ಯ ಪತಿ ಜಯಶಂಕರ್ ಅನ್ನು ಮಾತ್ರ ಬಂಧಿಸಿದ್ದಾರೆ. ಇನ್ನು ಆರೋಪಿಗಳಾದ ಮಾವ ಸಿದ್ದಮಲ್ಲಪ್ಪ, ಅತ್ತೆ ಸುಂದ್ರಮ್ಮ, ಬಾವ ಚಂದ್ರಶೇಖರ್, ವಾರಗಿತ್ತಿ ರೇಖಾ ಇವರುಗಳನ್ನು ಯಾಕೆ ಬಂಧಿಸಿಲ್ಲ ಎಂದು ಮೃತ ದಿವ್ಯ ಕುಟುಂಬಸ್ಥರು ನಗರದ ಡಿವೈಎಸ್ಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.