ಚಿಕ್ಕಬಳ್ಳಾಪುರದಲ್ಲಿ ಮತ್ತೆ,ಮತ್ತೆ ಭೂಮಿ ಶೇಕ್: ಜನರಲ್ಲಿ ಹೆಚ್ಚಿದ ಆತಂಕ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಪದೇ-ಪದೇ ಭೂಮಿ ಶೇಕ್ ಆಗುತ್ತಲೆ ಇದ್ದು, ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ತಿಂಗಳಿಂದ ಇಲ್ಲಿ ಮತ್ತೆ ಮತ್ತೆ ಭೂಕಂಪನ ಅನುಭವ ಆಗುತ್ತಲೇ‌ಇದೆ.

ಚಿಕ್ಕಬಳ್ಳಾಪುರದಲ್ಲಿ ಬುಧವಾರ ಮುಂಜಾನೆ 3 ಗಂಟೆ ಸುಮಾರಿಗೆ ಭೂಮಿ ನಡುಗಿದ್ದು, 3ರಿಂದ 4 ಸೆಕೆಂಡುಗಳ ಕಾಲ ಕಂಪನದ ಅನುಭವ ಆಗಿದೆ.

ಶೆಟ್ಟಿಗೆರೆ, ಬಂಡಹಳ್ಳಿ, ಪೇರೇಸಂದ್ರ, ಬಿಸೈಗಾರಪಲ್ಲಿ, ಪಿಳ್ಳಗುಂಡ್ಲಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಜನರಿಗೆ ಕಂಪನದ ಅನುಭವ ಆಗಿದೆ.

ಅಲ್ಲದೆ ಭೂಮಿ ಒಳಗಿಂದ ಭಾರೀ ಸ್ಪೋಟದ ಶಬ್ದ ಕೇಳಿ ಬಂದಿತೆಂದು ಸ್ಥಳೀಯರು ತಿಳಿಸಿದ್ದಾರೆ.

ತಕ್ಷಣ ಸರ್ಕಾರ ಇತ್ತ ಗಮನ ಹರಿಸಿ ಭೂಗರ್ಭ ತಜ್ಞರನ್ನು ಕರೆಸಿ ಕಾರಣ ಕಂಡುಹಿಡಿದು ಜನರಲ್ಲಿ ಉಂಟಾಗಿರುವ ಭಯವನ್ನು ಹೋಗಲಾಡಿಸಬೇಕಿದೆ.