ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ನೇತ್ರ ತಜ್ಞ ಅಮಾನತು

ಚಾಮರಾಜನಗರ:ಅಲ್ಪಾವದಿಯ ನರ್ಸಿಂಗ್ ತರಬೇತಿಗಾಗಿ ಸೇರಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದಿರಿಸುತ್ತಿದ್ದ ನೇತ್ರ ತಜ್ಞರೊಬ್ಬರನ್ನು ಅಮಾನತು ಪಡಿಸಲಾಗಿದೆ.

ಸಿಮ್ಸ್ ನೇತ್ರ ವಿಭಾಗದ ಮುಖ್ಯಸ್ಥ ಡಾ.ಮಹೇಶ್ವರನ್ ಅಮಾನತುಗೊಂಡ ವೈದ್ಯ‌ದಿಕಾರಿ.

ಇತ್ತೀಚೆಗೆ ಅಲ್ಪಾವದಿಯ ನರ್ಸಿಂಗ್ ತರಬೇತಿಗಾಗಿ ಸೇರಿದ್ದ ವಿದ್ಯಾರ್ಥಿ ನಿಯನ್ನು ಎಳೆದಾಡಿ, ಲೈಂಗಿಕ ಕಿರುಕುಳ ನೀಡಿ, ಅಸಹ್ಯವಾಗಿ ವರ್ತಿಸಿದ್ದರೆಂದು ಜಿಲ್ಲಾ ಸರ್ಜನ್​​ಗೆ ಯುವತಿ ದೂರು ಕೊಟ್ಟಿದ್ದಳು.

ವಿದ್ಯಾರ್ಥಿನಿಯನ್ನು ಎಳೆದಾಡಿ, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಚಾಮರಾಜನಗರ ಮೆಡಿಕಲ್ ಕಾಲೇಜಿನ ನೇತ್ರ ತಜ್ಞನನ್ನು ಸಿಮ್ಸ್ ಡೀನ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ಒಂದು ವಾರದಿಂದ ದೂರಿನ ಬಗ್ಗೆ ಆಂತರಿಕ ತನಿಖಾ ಸಮಿತಿಯು ವಿಚಾರಣೆ ನಡೆಸುತ್ತಿದ್ದು ಸದ್ಯ ವೈದ್ಯನನ್ನು ಅಮಾನತು ಮಾಡಲಾಗಿದೆ ಎಂದು ಡೀನ್ ಮಾಹಿತಿ ಕೊಟ್ಟಿದ್ದಾರೆ.

ಎನ್​ಜಿಒ ಮೂಲಕ ನರ್ಸಿಂಗ್​ ತರಬೇತಿಗೆ ಸೇರಿದ್ದ ಯುವತಿಯನ್ನು ವೈದ್ಯ ಎಳೆದಾಡಿದ ಸಂದರ್ಭದಲ್ಲಿ ಯುವತಿ ಚೀರಿಕೊಂಡಾಗ, ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ಇತರರು ಯುವತಿಯನ್ನು ರಕ್ಷಿಸಿ ಮಹೇಶ್ವರನ್​ಗೆ ಗೂಸ ಕೊಟ್ಟಿದ್ದರು.