ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಮತ್ತೇ ಜಾರಿಯಾಗಿರುವ ವಾರಾಂತ್ಯ ಕರ್ಫ್ಯೂಗೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಗುಂಪುಗೂಡಿ ಜನರು ಮಾತನಾಡುವುದು, ಅನಗತ್ಯ ಓಡಾಟ ನಡೆಸುವುದು ಸಾಮಾನ್ಯವಾಗಿದೆ.
ನಗರದಲ್ಲಿ ಕೆಲ ದಿನಸಿ ಅಂಗಡಿಗಳು ಬಾಗಿಲು ಮುಚ್ಚಿಕೊಂಡಿದ್ದರೇ ಸತ್ಯಮಂಗಲಂ ರಸ್ತೆಯಲ್ಲಿನ ಬಹುತೇಕ ಅಂಗಡಿಗಳು, ಟೀ ಶಾಪ್, ಬೇಕರಿ ತೆರೆದು ರಾಜಾರೋಷವಾಗಿ ವಹಿವಾಟು ನಡೆಸುತ್ತಿರುವುದು ಕಂಡುಬಂದಿತು.
ವಾರಾಂತ್ಯ ಕರ್ಫ್ಯೂ ಹೇರುವುಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದರೂ ಮಾಸ್ಕ್ ಧರಿಸಿದೇ ಜನರು ಓಡಾಡುತ್ತಿದ್ದು ನಗರಸಭೆಯಾಗಲಿ, ಸುರಕ್ಷಾ ಪಡೆಯಾಗಲಿ ತಲೆಕೆಡೆಸಿಕೊಂಡಿಲ್ಲ. ವಾರಾಂತ್ಯ ನಿಷೇಧದ ಪಾಲನೆಯನ್ನೂ ಜಿಲ್ಲೆಯಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲದಿರುವುದು ಸ್ಪಷ್ಟವಾಯಿತು.