ಮಗು ಹಾಲು ಕುಡಿಯದಕ್ಕೆ ವೈದ್ಯೆ ಆತ್ಮಹತ್ಯೆ

ಮೈಸೂರು: ಮಗು ಹಾಲು ಕುಡಿಯುತ್ತಿಲ್ಲವೆಂದು ಮನನೊಂದ ವೈದ್ಯೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಗುಂಡೂರಾವ್ ನಗರದ ನಿವಾಸಿ ಡಾ.ಅರ್ಪಿತಾ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ.

ಡಾ.ಅರ್ಪಿತಾ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು ಇವರಿಗೆ ಒಂಭತ್ತು ತಿಂಗಳ ಮಗುವಿದೆ.

ಮಗು ಕಳೆದ ಹದಿನೈದು ದಿನಗಳಿಂದ ಹಾಲು ಕುಡಿಯುವುದನ್ನು ನಿಲ್ಲಿಸಿತ್ತು. ಇದರಿಂದ  ಅರ್ಪಿತಾ ಬೇಜಾರು ಮಾಡಿಕೊಂಡಿದ್ದರೆಂದು ಹೇಳಲಾಗಿದೆ.

ಮನನೊಂದ ವೈದ್ಯೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.