ಕೋವಿಡ್: ಗೊಂದಲ ಮೂಡಿಸಿದ ಎರಡೆರೆಡು ವರದಿ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಒಂದು ಆಸ್ಪತ್ರೆಯಲ್ಲಿ ಯುವಕನಿಗೆ ಕೋವಿಡ್ ಪಾಸಿಟಿವ್ ಬಂದಿದ್ದರೆ, ಮತ್ತೊಂದರಲ್ಲಿ ನೆಗೆಟಿವ್ ಬಂದಿದ್ದು ತೀವ್ರ ಗೊಂದಲ ಉಂಟಾಗಿದೆ.

ಈ ಗೊಂದಲದ ಫಲಿತಾಂಶದಿಂದಾಗಿ ಇಂಟರ್‌ವ್ಯೂ ಕೂಡಾ ತಪ್ಪಿಸಿಕೊಂಡಿರುವ  ಯುವಕ ನೆಚ್ಚಿನ ಉದ್ಯೋಗ ಕಳೆದುಕೊಂಡಿದ್ದಾನೆ.

ಇಂತಹ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂಕಹಳ್ಳಿ ಗ್ರಾಮದ ಸುಮಂತ್ ಡಿಪ್ಲೊಮಾ ಪದವೀಧರ. ಪ್ರತಿಷ್ಟಿತ ಕಂಪನಿಯೊಂದಕ್ಕೆ ಉದ್ಯೋಗ ಅರಸಿ ಅರ್ಜಿ ಹಾಕಿದ್ದರು.

ಸಂದರ್ಶನಕ್ಕೆ ಹಾಜರಾಗಲು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದ್ದರಿಂದ ಸುಮಂತ್ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದರು.

ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಇವರ ಮೊಬೈಲ್​ಗೆ ಪಾಸಿಟಿವ್ ಎಂದು ಸಂದೇಶ ಬಂದಿದೆ.

ಇದರಿಂದ ವಿಚಲಿತರಾದ ಸುಮಂತ್ ತನ್ನ ತಂದೆಯ ಜೊತೆ ತಮ್ಮ ಗ್ರಾಮದ ಸಮೀಪ ಇರುವ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ 11ರ ಸುಮಾರಿಗೆ ಮತ್ತೆ ಗಂಟಲು ದ್ರವ ಕೊಟ್ಟಿದ್ದಾರೆ ಅದರಲ್ಲಿ ನೆಗೆಟಿವ್ ವರದಿ ಬಂದಿದೆ.

ಹಾಗಾಗಿ ಗಂದಲಗೊಂಡ ಸುಮಂತ್  ಮುಂಜಾಗ್ರತೆಯಾಗಿ ಗುಂಡ್ಲುಪೇಟೆ ಕೋವಿಡ್ ಕೇರ್ ಸೆಂಟರಿಗೆ ದಾಖಲಾಗಿದ್ದಾರೆ.