ದೇಶದಲ್ಲಿ ಕೊರೊನಾ ಸ್ಪೋಟ: ಒಂದೇ ದಿನ 2 ಲಕ್ಷ ಸಮೀಪ ಪ್ರಕರಣ ಪತ್ತೆ

ನವದೆಹಲಿ:ದೇಶದಲ್ಲಿ ಕೊರೊನಾ ಅನಿಯಂತ್ರಿತ ವೇಗದಲ್ಲಿ ಹೆಚ್ಚುತ್ತಿದೆ.

ಕಳೆದ 24 ಗಂಟೆಗಳಲ್ಲಿ 1,94,720 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದರೆ, 442 ಜನರು ಸಾವನ್ನಪ್ಪಿದ್ದಾರೆ.

ಆದಾಗ್ಯೂ  60406 ಕೊರೋನಾ ರೋಗಿಗಳು ಗುಣಮುಖರಾಗಿದ್ದಾರೆ.

ದೇಶದಲ್ಲಿ ಒಟ್ಟು ಕೊರೋನಾ ಪ್ರಕರಣಗಳು 3 ಕೋಟಿ 60 ಲಕ್ಷ 510 ಕ್ಕೆ ಏರಿಕೆಯಾಗಿದ್ದು, ಸಕ್ರಿಯ ರೋಗಿಗಳ ಸಂಖ್ಯೆ 9 ಲಕ್ಷ 55 ಸಾವಿರ 319 ಕ್ಕೆ ಏರಿದೆ.

ಓಮಿಕ್ರಾನ್ ಪ್ರಕರಣಗಳು 4868 ಕ್ಕೆ ಏರಿದೆ.

ಇದುವರೆಗೆ ದೇಶದಲ್ಲಿ ಒಟ್ಟು 4 ಲಕ್ಷ 84 ಸಾವಿರದ 655 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೋನಾದ ಈ ವೇಗದ ನಡುವೆಯೂ ಲಸಿಕೆ ಅಭಿಯಾನ ಕೂಡಾ ಉತ್ಸಾಹದಿಂದ  ಮುಂದುವರಿದಿದೆ. ಇಲ್ಲಿಯವರೆಗೆ 153 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ.