ಬೆಂಗಳೂರು:ಬುಧವಾರ ಮಧ್ಯಾಹ್ನವಷ್ಟೆ ಹೈಕೋರ್ಟ್ ಸರ್ಕಾರಕ್ಕೆ ಹಾಗೂ ಕೆಪಿಸಿಸಿಗೆ ತಪರಾಕಿ ಹಾಕಿದ ಬೆನ್ನಲ್ಲೇ ರಾಜ್ಯ ಸರ್ಕಾರ ತುರ್ತು ಆದೇಶ ಹರಡಿಸಿದ್ದು,ಕೂಡಲೆ ಪಾದಯಾತ್ರೆ ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಿದೆ.
ಕಾಂಗ್ರೆಸ್ ನವರ ಪಾದಯಾತ್ರೆ ನಾಲ್ಕನೆ ದಿನಕ್ಕೆ ಮುಕ್ತಾಯವಾಗಬೇಕಾಗಿದೆ.ಆದರೆ ಏನಾಗುವುದೊ ಕಾದು ನೋಡಬೇಕಿದೆ.
ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ನವರು ಅನುಮತಿ ಪಡೆದಿದ್ದಾರ,ಕೊರೊನ ಸೋಂಕು ಅತಿ ಹೆಚ್ಚಾಗಿ ಹರಡಿರುವಾಗ ಅದು ಹೇಗೆ ಪಾದಯಾತ್ರೆಗೆ ಅನುಮತಿ ಕೊಟ್ಟಿದ್ದೀರಿ ಎಂದು ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿತ್ತು.
ಕಡೆಗೂ ಸರ್ಕಾರ ಎಚ್ಚೆತ್ತುಕೊಂಡಿದೆ. ಪಾದಯಾತ್ರೆ ನಿಲ್ಲಿಸುವಂತೆ ಸೂಚಿಸಿದೆ.
ಈ ಬಗ್ಗೆ ಕ್ರಮ ಕೈಗಳ್ಳುವಂತೆ ಸರ್ಕಾರ ರಾಮನಗರ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಪೊಲೀಸ್ ಆಯುಕ್ತರಿಗೆ ಆದೇಶಿಸಲಾಗಿದೆ.
ಸರ್ಕಾರವೇನೊ ತಕ್ಷಣದಿಂದಲೇ ಪಾದಯಾತ್ರೆ ನಿಲ್ಲಿಸುವಂತೆ ಸೂಚಿಸಿದೆ. ಆದರೆ ಕಾಂಗ್ರೆಸ್ ನಡೆ ಏನೆಂಬ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.