(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಠಾಣೆಗೆ ನ್ಯಾಯಾದೀಶರು ಭೇಟಿ ನೀಡಿದ ಸಮಯದಲ್ಲಿ ಬಾಗಿಲು ಹಾಕಿದ್ದರಿಂದ ನ್ಯಾಯಾದೀಶರು ವರದಿ ಕೇಳಿದ ಹಿನ್ನಲೆಯಲ್ಲಿ ಚಾಮರಾಜನಗರ ಎಸ್ಪಿ ಅವರು ಇನ್ಸ್ ಪೆಕ್ಟರ್ ಅವರನ್ನ ಅಮಾನತು ಮಾಡಿರುವ ಸುದ್ದಿ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸಿಇಎನ್ ಠಾಣೆಯ ನಂಜಪ್ಪ ಅವರನ್ನ ಅಮಾನತು ಮಾಡಲಾಗಿದೆ ಎಂದು ಹೇಳಲಾದರೂ, ಇದನ್ನು ಎಸ್ಪಿ ಅವರು ಆದೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲು ಸದರನ್ ವಲಯದ ಮುಖ್ಯಾದಿಕಾರಿ(ಐಜಿಪಿ) ಅವರಿಗೆ ಮಾತ್ರ ಅಧಿಕಾರ ಇರಲಿದೆ.
ಆದರೆ ಇಲ್ಲಿನ ಇನ್ಸ್ ಪೆಕ್ಟರ್ ಅವರನ್ನು ಐಜಿಪಿ ಮಾಡದೆ ಎಸ್ಪಿ ಅವರು ಹೇಗೆ ಮಾಡಿದರು ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಲ್ಲಕ್ಕಿಂತ ಮಿಗಿಲಾಗಿ ಇನ್ಸ್ ಪೆಕ್ಟರ್ ನಂಜಪ್ಪ ಅವರು ಅಂದು ಎಸ್ಪಿ ಅವರ ಅನುಮತಿಯ ಮೇರೆಗೆ ಅಂತರ್ಜಿಲ್ಲಾ ನ್ಯಾಯಾಲಯಕ್ಕೆ ತೆರಳಿದ್ದರು.
ಆದರೂ ಇಲಾಖಾ ನೀತಿನಿಯಮ ಅನುಸರಿಸದೇ ಏಕಾಏಕಿ ಅಮಾನತು ಮಾಡಿದ್ದಾದರೂ ಯಾಕೆ ಎಂಬ ಗೊಂದಲ ಉಂಟಾಗಿದೆ.
ಠಾಣೆಯಲ್ಲಿ ಅದೀನ ಸಿಬ್ಬಂದಿಗಳಾದ ಎಎಸ್ಐ,ಮುಖ್ಯಪೇದೆ,ಪೇದೆಗಳಿದ್ದರೂ ಠಾಣೆಯ ಜವಬ್ದಾರಿಯನ್ನ ಯಾರಾದರೂ ಹೊತ್ತಿರುತ್ತಾರೆ.
ಲೋಪ ಎಸಗಿದ ಸಿಬ್ಬಂದಿಗಳ ವಿಚಾರಣೆ ಮಾಡದೇ ಏಕಾಏಕಿ ಇನ್ಸ್ ಪೆಕ್ಟರ್ ನಂಜಪ್ಪ ಅವರನ್ನ ಅಮಾನತು ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ.