ಸೋಂಕು ಕಡಿಮೆ ಮಾಡಲು ಲಸಿಕೆ ರಾಮಭಾಣ-ಮೋದಿ

ಬೆಂಗಳೂರು: ಕೋವಿಡ್ ಸೋಂಕು ಕಡಿಮೆಯಾಗಲು ಲಸಿಕೆಯೊಂದೇ ರಾಮಭಾಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ವಿವಿಧ ರಾಜ್ಯಗಳ ಮುಖ್ಯ ಮಂತ್ರಿಗಳೊಂದಿಗಿನ ವರ್ಚುವಲ್ ಸಭೆಯ ನಂತರ ಅವರು ಮಾತನಾಡಿದರು.

ದೇಶದಲ್ಲಿ ಕೊರೊನ ಕಂಟ್ರೋಲ್ ನಲ್ಲಿದೆ. ಶೇ.75 ರಷ್ಟು ಲಸಿಕೆ ನೀಡುವ ಕಾರ್ಯ ಮುಗಿದಿದೆ.ಕೋವಿಡ್ ಪರಿಣಾಮಕಾರಿಯಾಗಿ ತಡೆಯಲು ಎಲ್ಲಾ ರಾಜ್ಯಗಳಲ್ಲೂ ಮನೆ,ಮನೆಗೆ ತೆರಳಿ ಜನರಲ್ಲಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕೆಂದು ಮೋದಿ ಸಲಹೆ ನೀಡಿದರು.

ಲಸಿಕೆ ಹಾಕಿಸಿಕೊಳ್ಳುವುದರ ಜತೆಗೆ ಕಶಾಯವೂ ಒಳ್ಳೆಯದು, ಹಾಗೆಂದು ಅದೇ ಔಷಧಿಯಲ್ಲ, ಕೊರೊನ ಬಗ್ಗೆ ಮುಂಜಾಗ್ರತೆ ವಹಿಸುವುದು ಅತಿ ಮುಖ್ಯ ಎಂದು ತಿಳಿಸಿದರು.

ಅಗತ್ಯವಿರುವ ಎಲ್ಲಾ ರಾಜ್ಯಗಳಿಗೂ ಔಷಧಿ ಹಾಗೂ ಲಸಿಕೆ ಪೂರೈಸಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಪ್ರಧಾನ ಮಂತ್ರಿ ಭರವಸೆ ನೀಡಿದರು.

ಎಲ್ಲಾ ರಾಜ್ಯಗಳಲ್ಲೂ ಕೋವಿಡ್ ನಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಾಗಿರಬೇಕು ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು.

ಕೊರೊನಾ ತಡೆಗೆ ಟ್ರ್ಯಾಕಿಂಗ್,ಟ್ರೇಸಿಂಗ್ ಎರಡೂ ಮುಖ್ಯ ಹಾಗಾಗಿ ಕೊರೊನ ಪರೀಕ್ಷೆ  ಮುಂದುವರಿಸುವಂತೆ ಮತ್ತು ಲಸಿಕೀಕರಣ ಹೆಚ್ಚು ಮಾಡಬೇಕೆಂದು ಪ್ರಧಾನಿ ಮೋದಿ ಮುಖ್ಯ ಮಂತ್ರಿಗಳಿಗೆ ಸೂಚಿಸಿದರು.

ಕರ್ನಾಟಕದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ರಾಜ್ಯದ ಕೋವಿಡ್ ಪರಿಸ್ಥಿತಿ ಮತ್ತು ಇದನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳನ್ನು ತಿಳಿಸಿದ್ದಾರೆ.