ಹಾಸನ:ಶಿಕ್ಷಣ ಕ್ಷೇತ್ರದ ಬೆಳವಣಿಗೆಯ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ.ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆರೋಪಿಸಿದರು
ಹಾಸನದಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು,ಖಾಸಗಿ ಕಾಲೇಜು ಆಡಳಿತ ಮಂಡಳಿಯ ಹಿಡಿತದಲ್ಲಿ ಬಿಜೆಪಿ ಸರ್ಕಾರ ನಡೆಯುತ್ತಿದೆ ಎಂದು ದೂರಿದರು.
ಮುಖ್ಯ ಮಂತ್ರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೊಳೆನರಸೀಪುರಕ್ಕೆ ಬಂದು ಕಾಲೇಜುಗಳ ಸ್ಶಿತಿ ನೋಡಬೇಕು, ಯಾವ ರೀತಿ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂಬುದನ್ನು ಖುದ್ದಾಗಿ ನೋಡಲಿ ಎಂದು ಹೇಳಿದರು.
ಶಿಕ್ಷಣದ ವಿಷಯದಲ್ಲಿ ದ್ವೇಷ ರಾಜಕೀಯ ಸರಿಯಲ್ಲ…ಈ ಕಾಲೇಜಿನಲ್ಲಿ ನನ್ನ ಮಕ್ಕಳು ಓದುವುದಿಲ್ಲ ಬಡವರ ಮಕ್ಕಳು ಓದುತ್ತಾರೆ. ಆದರೆ ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಶ್ರಮದಿಂದ ಹಾಸನದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಆಗಿದೆ.ಅಲ್ಲದೆ ಹೊಳೆನರಸೀಪುರದಲ್ಲೂ ಇಂಜಿನಿಯರಿಂಗ್ ಕಾಲೇಜು ಮಾಡಲಾಗಿದೆ.
ಒಂದು ವರ್ಷದಿಂದ ಹೊಳೆನರಸೀಪುರದಲ್ಲಿ ಮಹಿಳಾ ಕಾಲೇಜು ನಡೆಯುತ್ತಿದೆ, ಇಲ್ಲಿ ಎಮ್ ಎಸ್ ಸಿ ಪುಡ್ ಅಂಡ್ ನ್ಯೂಟ್ರೀಷಿಯನ್ ಕೋರ್ಸ್ ತೆರೆಯಲು .. ಮೈಸೂರು ವಿಶ್ವವಿದ್ಯಾನಿಲಯದ ಅನುಮತಿ ಇದೆ.
ಸರ್ಕಾರದ ಕಾರ್ಯದರ್ಶಿ ಸಹ ಮುಂದಿನ ಕ್ರಮಕೈಗೊಂಡಿದ್ದಾರೆ ಆದರೆ ರಾಜ್ಯ ಶಿಕ್ಷಣ ಮಂತ್ರಿ ಇದಕ್ಕೆ ಅನುಮತಿ ನೀಡದೆ ನಿರಾಕರಿಸಿದ್ದಾರೆ ಎಂದು ದೂರಿದರು.
ರಾಜ್ಯ ಶಿಕ್ಷಣ ಸಚಿವರು ಹಾಗೂ ಸರ್ಕಾರ ಖಾಸಗಿಯವರ ಅಡಿಯಾಳಾಗಿದೆ . ಆದ್ದರಿಂದ ಸರ್ಕಾರಿ ಕಾಲೇಜು ಬೆಳವಣಿಗೆಗೆ ಸಹಕಾರ ನೀಡುತ್ತಿಲ್ಲ ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಮಾರಕವಾಗಿರುವ ಸರ್ಕಾರದ ನಡೆ ವಿರುದ್ಧ ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರನ್ನು ಹೊರತುಪಡಿಸಿ ಜ.18 ರಂದು ಮಂಗಳವಾರ ಏಕಾಂಗಿಯಾಗಿ ಸಿಎಂ ಮನೆ ಮುಂದೆ ಧರಣಿ ಕೂರುವೆ ಎಂದು ರೇವಣ್ಣ ಎಚ್ಚರಿಸಿದರು.
ಕಳೆದ ೧೫ ದಿನದಿಂದ ಅತಿಥಿ ಉಪನ್ಯಾಸಕರು ಕಾಲೇಜಿಗೆ ಬರುತ್ತಿಲ್ಲ ಮುಷ್ಕರ ಮಾಡುತ್ತಿದ್ದಾರೆ ..ಸರ್ಕಾರದ ಇಂತಹ ಕ್ರಮದ ವಿರುದ್ದ ರಾಜಧಾನಿ ಯಲ್ಲಿ ಸಿಎಮ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ. ಜನಕ್ಕೋಸ್ಕರ ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.