ಮಂಡ್ಯ: ಉಮೇಶ್ ಕತ್ತಿ ಮಂತ್ರಿ ಆಗಲಿಕ್ಕೆ ಯೋಗ್ಯ ಅಲ್ಲ. ಮಾಸ್ಕ್ ಹಾಕದೆ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಮಂಡ್ಯದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತನಾಡಿದರು.
ಮಂತ್ರಿಯಾಗಲು ಲಾಯಕ್ಕಾ ಇವರು? ಇವರ ಮೇಲೆ ಸರ್ಕಾರ ಯಾಕೆ ಕೇಸ್ ಹಾಕಿಲ್ಲ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಒಬ್ಬ ಮಂತ್ರಿಯಾಗಿ ಕತ್ತಿ , ಮಾಸ್ಕ್ ಹಾಕದಿರುವವರನ್ನ ಬಿಟ್ಟುಬಿಡಿ, ಕಡ್ಡಾಯ ಮಾಡಬೇಡಿ. ಇಷ್ಟ ಬಂದವರು ಹಾಕ್ತಾರೆ, ಇಷ್ಟ ಇಲ್ಲದವರು ಇರ್ತಾರೆ. ಒತ್ತಾಯ ಮಾಡಬೇಡಿ ಅಂತ ಹೇಳ್ತಾರೆ ಇದು ಸರಿಯೇ ಎಂದರು ಸಿದ್ದರಾಮಯ್ಯ.
ಸರ್ಕಾರ ನಡೆಸಲಿಕ್ಕೆ ಇವರಿಗೆ ಯೋಗ್ಯತೆ ಇದ್ಯಾ ? ಮಂತ್ರಿಯೇ ಮಾಸ್ಕ್ ಹಾಕಲಿಲ್ಲ ಅಂದರೆ ಬೇರೆಯವರು ಏಕೆ ಹಾಕಬೇಕು?
ಬೇರೆಯವರಿಗೆ ದಂಡ ಹಾಕ್ತಾರೆ, ಕೇಸ್ ದಾಖಲು ಮಾಡ್ತಾರೆ.ಮಾಸ್ಕ್ ಧರಿಸದ ಮಂತ್ರಿ ಮೇಲೆ ಕೇಸ್ ಹಾಕಬೇಕು ತಾನೆ ಎಂದರು.
ನನ್ನ ಪ್ರಕಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಗತ್ಯ ಇಲ್ಲ. ವೀಕೆಂಡ್ ಕರ್ಫ್ಯೂನಿಂದ ಕೊರೋನಾ ತಡೆಗಟ್ಟಲು ಸಾಧ್ಯವಿಲ್ಲ.
ಸರ್ಕಾರ ಎಲ್ಲರಿಗೂ ಲಸಿಕೆ ನೀಡಲಿ ಎಂದು ಸಿದ್ದರಾಮಯ್ಯನವರು ಹೇಳಿದರು.
ಬಿಜೆಪಿಯವರು ಯಾವಾಗಲೂ ಡಬಲ್ ಸ್ಟ್ಯಾಂಡರ್ಡ್ ನವರೇ.ಅವರಿಗೆ ಯಾವ ಸಿಂಗಲ್ ಸ್ಟ್ಯಾಂಡರ್ಡ್ ಇದೆ? ಅವರು ಯಾವಾಗಲೂ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಟೀಕಿಸಿದರು.