ವಿವಾಹಕ್ಕೆ ಬರಬೇಡಿ ಎಂಬ ಕರೆಯೋಲೆ ಹಂಚಿಕೆ

ಚಾಮರಾಜನಗರ : ಸಾಮಾನ್ಯವಾಗಿ ಮದುವೆ ಎಂದರೆ ಸಂಭ್ರಮ, ಸಡಗರ…

ಆವ್ಹಾನ ಪತ್ರಿಕೆ ಕೊಟ್ಟು ನೀವೂ ಬನ್ನಿ-ನಿಮ್ಮ ಮನೆಯವರನ್ನೂ ಕರೆತನ್ನಿ ಎಂದು ಕರೆಯುವುದು ಸಾಮಾನ್ಯ.

ಆದರೆ ಇಲ್ಲೊಂದು ಜೋಡಿ ಕೊರೊನಾದಿಂದಾಗಿ ಮದುವೆಗೆ ಬರಬೇಡಿ ಎಂಬ ಕರೆಯೋಲೆ ಹಂಚಿರುವುದು ವಿಶೇಷ ವಾಗಿದೆ.

ತಾಲೂಕಿನ ಚೆನ್ನಪ್ಪನಪುರ ಗ್ರಾಮದ ಶ್ರೇಯಸ್ ಹಾಗೂ ವಿ.ಸಿ.ಹೊಸೂರಿನ ಸುಷ್ಮಾ ಅವರ ವಿವಾಹವು ಬಹಳ ಹಿಂದೆಯೇ ನಿಗದಿಯಾಗಿತ್ತು.

ಆಮಂತ್ರಣ ಪತ್ರಿಕೆಗಳನ್ನು ಹಂಚಲಾಗಿತ್ತು.‌ಆದರೆ, ಕೊರೊನಾ ಕೇಸ್ ಹೆಚ್ಚಾಗುತ್ತಿರುವುದರಿಂದ ಮತ್ತೊಂದು ಕರೆಯೋಲೆಯನ್ನು ವಧು-ವರರ ಕುಟುಂಬ ಮುದ್ರಿಸಿವೆ.

ಮನೆಯಲ್ಲೇ ಇದ್ದು ತಮಗೆ ಆಶೀರ್ವಾದ ಮಾಡಬೇಕೆಂಬ ಪತ್ರಿಕೆಗಳನ್ನು ಕುಟುಂಬದವರು ಹಂಚುತ್ತಿದ್ದಾರೆ.

ಜನವರಿ 22-23 ಶ್ರೇಯಸ್ ಹಾಗೂ ಸುಷ್ಮಾ ಅವರ ವಿವಾಹ ನಿಶ್ಚಯವಾಗಿದ್ದು ಸಾವಿರಾರು ಆಮಂತ್ರಣ ಪತ್ರಿಕೆಗಳನ್ನು ಹಂಚಲಾಗಿತ್ತು.

ಇದೀಗ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇರುವುದರಿಂದ ನಿಯಮ ಪಾಲಿಸುವ ಉದ್ದೇಶದಿಂದ ಸರಳ ವಿವಾಹ ಮಾಡಿಕೊಳ್ಳಲು ನಿಶ್ವಯಿಸಿ ವಿವಾಹಕ್ಕೆ ತಾವಿರುವಲ್ಲಿಂದಲೇ ಆಶೀರ್ವಾದ ಮಾಡುವಂತೆ ಕೋರಿದ್ದಾರೆ ಈ ಮೂಲಕ ಜಾಗೃತಿ ಮೂಡಿಸಿದ್ದಾರೆ.