ಏಳು ಮಂದಿ ಬಂಧನ: 7 ಕೋಟಿ ನಕಲಿ ನೋಟುಗಳ ವಶ

ಮುಂಬೈ: ನಕಲಿ ನೋಟುಗಳ ಮುದ್ರಣ ಮಾಡಿ ವಿತರಣೆಯಲ್ಲಿ ತೊಡಗಿದ್ದ ಅಂತಾರಾಜ್ಯ ತಂಡವನ್ನು  ಮುಂಬೈ ಪೊಲೀಸರು ಭೇದಿಸಿದ್ದಾರೆ.

ಪೊಲೀಸರು ಒಟ್ಟು  ಏಳು ಮಂದಿಯನ್ನು ಬಂಧಿಸಿ 7 ಕೋಟಿ ಮುಖ ಬೆಲೆಯ ನಕಲಿ  ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮುಂಬೈ ಅಪರಾಧ ವಿಭಾಗದ ಪೋಲೀಸರ ತಂಡ ಉಪನಗರದ ದಹಿಸರ್ ಚೆಕ್ ಪೋಸ್ಟ್‌ ನಲ್ಲಿ ಕಾರನ್ನು ತಡೆದು ಪರಿಶಿಲಿಸಿದಾಗ  ಈ ದಂಧೆ ಬೆಳಕಿಗೆ ಬಂದಿದೆ.

ಕಾರನ್ನು ಪರಿಶಿಲಿಸಿದಾಗ 2,000 ಮುಖಬೆಲೆಯ 5 ಕೋಟಿ ನಕಲಿ ನೋಟುಗಳಿದ್ದ ಚೀಲ ಸಹಾ ಪತ್ತೆಯಾಗಿದೆ. 

ನಾಲ್ವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಇನ್ನೂ ಮೂವರು ಸಹಾಯಕರ ಬಗ್ಗೆಮಾಹಿತಿ ನೀಡಿದ್ದಾರೆ.

ಅದರಂತೆ, ಪೊಲೀಸ್ ತಂಡವು ಅಂಧೇರಿ ಹೋಟೆಲ್‍ನಲ್ಲಿ ದಾಳಿ ನಡೆಸಿ 2 ಕೋಟಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರನ್ನು ಬಂಸಿದ್ದಾರೆ‌ ಎಂದು ಅಧಿಕಾರಿ ತಿಳಿಸಿದ್ದಾರೆ.

ನಕಲಿ ನೋಟುಗಳ ಜೊತೆಗೆ ಒಂದು ಲ್ಯಾಪ್‍ ಟಾಪ್ ಏಳು ಮೊಬೈಲ್ ಫೋನ್ 28,170 ನಗದು ಹಣ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಮತ್ತು ಚಾಲನಾ ಪರವಾನಗಿ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.