ಜಿಲ್ಲಾ ಎಸ್ಪಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕಾರ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಯ ನೂತನ ಪೆÇಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‍ಪಿ) ಟಿ. ಪಿ. ಶಿವಕುಮಾರ್ ಶನಿವಾರ ಅಧಿಕಾರ ವಹಿಸಿಕೊಂಡರು.

ಶಿವಕುಮಾರ್ ಅವರು ಬೆಂಗಳೂರಿನ ಕಾರಾಗೃಹಗಳ ಪೆÇಲೀಸ್ ವರಿಷ್ಠಾಧಿಕಾರಿಯಾಗಿದ್ದರು.

ಮೈಸೂರು, ಹಾವೇರಿ, ಬಾಗಲಕೋಟೆ, ಹಾಸನ, ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಡಿವೈಸ್ಪಿಯಾಗಿ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿಯಾಗಿ ಮಂಗಳೂರು, ಡಿಸಿಪಿಯಾಗಿ ಬೆಳಗಾವಿ, ಮೈಸೂರು ವಿಭಾಗದ ವಿಶುಲೆನ್ಸ್ ಎಸ್ಪಿಯಾಗಿ, ಬೆಂಗಳೂರು ಡಿಸಿಪಿಯಾಗಿ, ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ, ಬಂದಿಖಾನೆ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿರುವ ಇವರು ಇಂದು ಚಾಮರಾಜನಗರ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.