ನೀರನ್ನು ಪೋಲು ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು -ಬೊಮ್ಮಾಯಿ

ಬೆಂಗಳೂರು: ಪ್ರತಿಯೊಬ್ಬರೂ ನೀರನ್ನು ವ್ಯರ್ಥ ಮಾಡದೇ  ಸದುಪಯೋಗ ಪಡಿಸಿಕೊಳ್ಳಬೇಕು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಬೆಂಗಳೂರಿನ ಕೆ ‌ಅರ್.ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೆಚ್.ಎ.ಎಲ್ ನ ಜಗದೀಶ್ ನಗರದಲ್ಲಿ 7.50 ದಶಲಕ್ಷ ಲೀಟರ್ ಸಾಮರ್ಥ್ಯದ ಚೌಕಾಕಾರದ ನೆಲಮಟ್ಟದ ಜಲ ಸಂಗ್ರಹಾರವನ್ನು ಲೋಕಾರ್ಪಣೆ  ನೆರವೇರಿಸಿ  ಸಿಎಂ‌ ಮಾತನಾಡಿದರು.

ಈ ಯೋಜನೆಯಿಂದ ಒಂಭತ್ತು ಪ್ರಮುಖ ಬಡಾವಣೆಗಳಿಗೆ ನೀರನ್ನು ಒದಗಿಸಲಾಗುವುದು. ಕೆ.ಆರ್.ಪುರಂನ ಸಮಗ್ರ ಅಭಿವೃದ್ಧಿಗೆ ದಾಖಲೆಯ ಕೆಲಸಗಳನ್ನು ಸಚಿವ ಬಿ.ಎ.ಬಸರಾಜ ಅವರು ಮಾಡಿದ್ದಾರೆ, ಆ ಪೈಕಿ ಜಿ.ಎಲ್.ಆರ್ ಕೆಲಸವೂ ಒಂದು ಎಂದು ತಿಳಿಸಿದರು.

ಜನರ ಬಗ್ಗೆ ಕಳಕಳಿ ಇರುವ ಬೈರತಿ  ಬಸವರಾಜ ಅವರು ಜನ ಸೇವಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು  ನಗರಾಭಿವೃದ್ಧಿ ಸಚಿವರಾದ  ಬಿ.ಎ.ಬಸವರಾಜ ವಹಿಸಿದ್ದರು

ಸಚಿವರಾದ ಡಾ: ಕೆ.ಸುಧಾಕರ್,  ಎಸ್.ಟಿ.ಸೋಮಶೇಖರ್ ಸೇರಿದಂತೆ  ಹಲವು ಗಣ್ಯರು ಉಪಸ್ಥಿತರಿದ್ದರು.