ಮೈಸೂರು:ವಿವಾಹಿತ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ.
ಉದಯಗಿರಿಯ ಸುನೀತಾ (30) ಕೊಲೆಯಾದ ದುರ್ದೈವಿ.
ಗಿರೀಶ ಎಂಬಾತ ಕೊಲೆ ಮಾಡಿದ ಆರೋಪಿ.
ಅಡ್ಡಬಂದ ಮಹಿಳೆಯ ತಾಯಿ ಭಾರತಿ ಮೇಲೂ ಹಲ್ಲೆ ನಡೆಸಿ ಆರೋಪಿಪರಾರಿಯಾಗಿದ್ದಾನೆ.
ಭಾರತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕ್ಯಾತಮಾರನಹಳ್ಳಿಯ ಶ್ರೀಕಂಠೇಶ್ವರ ಶಾಲೆ ಬಳಿ ಈ ಘಟನೆ ನಡೆದಿದೆ.ಸುನಿತಾಳಿಗೂ ಆರೋಪಿ ಗಿರೀಶ್ ಪ್ರೀತಿ ಇತ್ತೆಂದೂ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರೆಂದು ತಿಳಿದು ಬಂದಿದೆ.
ಆದರೆ ಸುನಿತಾಳಿಗೆ ಮನೆಯವರು ಬೇರೆ ಮದುವೆ ಮಾಡಿದ್ದಾರೆ.ಇದರಿಂದ ಗಿರೀಶ್ ಕೋಪಗೊಂಡಿದ್ದ.
ಕಳೆದ ಮೂರು ತಿಂಗಳಿಂದ ಗಿರೀಶ್ ತಮಿಳುನಾಡಿನಲ್ಲಿ ನೆಲಸಿದ್ದು ಎರಡು ದಿನಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದಾನೆ.
ಟೊಮೊಟೋ ಮಾರಾಟದ ವಿಚಾರದಲ್ಲಿ ಕ್ಯಾತೆ ತೆಗೆದ ಗಿರೀಶ್ ಮಚ್ಚಿನಿಂದ ಸುನಿತಾಳ ಮೇಲೆ ಹಲ್ಲೆ ನಡೆಸಿದ್ದಾನೆ.
ಸುನಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ಅಡ್ಡ ಬಂದ ತಾಯಿ ಭಾರತಿ ಮೇಲೂ ಗಿರೀಶ್ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದಯಗಿರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.