ಹಿಜಬ್-ಕೇಸರಿ ಶಾಲು ತೆಗೆದಿಟ್ಟು ತರಗತಿಗೆ ವಿದ್ಯಾರ್ಥಿಗಳು ಹಾಜರಾಗಲಿ -ಎಸ್ ಡಿ ಎಂ ಸಿ ಸಭೆಯಲ್ಲಿ ನಿರ್ಣಯ

ಉಡುಪಿ:ಹಿಜಬ್-ಕೇಸರಿ ಶಾಲು ತಾರಕಕ್ಕೇರುತ್ತಿರುವ ಉಡುಪಿಯ ಕುಂದಾಪುರದ ಸರ್ಕಾರಿ ಶಾಲೆಯಲ್ಲಿ ಎಸ್ ಡಿ ಎಂ ಸಿ ಸಭೆ ನಡೆಸಿ‌ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನು ಮುಂದೆ ವಿದ್ಯಾರ್ಥಿಗಳು ಹಿಜಬ್ ಆಗಲಿ ಕೇಸರಿ ಶಾಲನ್ನಾಗಲಿ ಧರಿಸಿ ತರಗತಿಗೆ ಹಾಜರಾಗುವಂತಿಲ್ಲ ಎಂದು ನಿರ್ಣಯವನ್ನು ಕೈಗೊಳ್ಳಲಾಗಿದೆ.

ಈ ಬಗ್ಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ‌ಸೂಚನೆ ನೀಡಿದ್ದು ಇನ್ನು ಮುಂದೆ ಯಾವುದೇ ವಿದ್ಯಾರ್ಥಿ ಕೇಸರಿ ಶಾಲಾಗಲಿ,ಹಿಜಬ್ ಆಗಲಿ ಧರಿಸಿ ಬರಬಾರದು ಎಂದು ತಿಳಿಸಿದ್ದಾರೆ.

ಎಸ್ ಡಿಎಂಸಿ ಸಭೆಯಲ್ಲಿಅಧ್ಯಕ್ಷರು,ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೇ ಸೋಮವಾರದಿಂದ ಶಾಲೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಶಾಲೆಯ ಆವರಣದಲ್ಲಿ ಪ್ರತ್ಯೇಕ ಕೊಠಡಿ ತೆರೆಯಲಾಗುವುದು ಅಲ್ಲಿ ಕೇಸರಿ ಶಾಲು ಹಾಗೂ ಹಿಜಬ್ ತೆಗೆದಿಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಿಜಬ್ ಹಾಗೂ ಕೇಸರಿ ಶಾಲು ತೆಗೆದಿಟ್ಟು ಬರುವ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬಹುದು ಎಂದು ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.