ಮೈಸೂರು: ನಾಲ್ಕು ಮಕ್ಕಳು ಸೇರಿದಂತೆ ಒಂದೇ ಮನೆಯ ಐವರನ್ನು ಕೊಲೆ ಮಾಡಿರುವ ಭೀಕರ ಘಟನೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ತಾಲೂಕಿನ ಜನತೆ ಬೆಚ್ಚಿ ಬಿದ್ದಿದೆ.
ಕೆಆರ್ಎಸ್ನ ಬಜಾರ್ ಲೈನ್ನಲ್ಲಿ ಘಟನೆ ನಡೆದಿದ್ದು, ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4), ಗೋವಿಂದ (8) ಕೊಲೆಯಾದ ದುರ್ದೈವಿಗಳು.
ಭೈಯಾದ್ ಜನಾಂಗದ ಗಂಗಾರಾಮ್ ಎಂಬವರ ಪತ್ನಿ ಹಾಗೂ ಅವರ ಮೂವರು ಮಕ್ಕಳು ಹಾಗೂ ಗಂಗಾರಾಮ್ ಅಣ್ಣ ಗೋವಿಂದನ ಮಗ ಕೊಲೆಯಾಗಿದ್ದಾರೆ.
ಗಂಗಾರಾಮ್ ಆತನ ಅಣ್ಣ ವ್ಯಾಪಾರಿಗಳು. ಹಾಗಾಗಿ ವ್ಯಾಪಾರಕ್ಕೆಂದು 10 ದಿನಗಳ ಹಿಂದೆಯೇ ಗಂಗಾರಾಮ್, ಅಣ್ಣ ಗಣೇಶ್, ಅತ್ತಿಗೆ ಚಂಪಾಡಿ ವ್ಯಾಪಾರಕ್ಕೆ ತೆರಳಿದ್ದರು.
ನಾಲ್ವರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಲಕ್ಷ್ಮೀ ಇದ್ದರು.
ಶನಿವಾರ ರಾತ್ರಿ ಮಕ್ಕಳೊಂದಿಗೆ ಲಕ್ಷ್ಮೀ ಮಲಗಿದ್ದ ವೇಳೆ ಈ ಹೇಯ ಕೃತ್ಯ ನಡೆದಿದೆ.
ಮನೆಯೊಳಗೆ ನುಗ್ಗಿ ಐದು ಮಂದಿಯನ್ನು ಕೊಲೆ ಮಾಡಿರುವ ಹಂತಕರು ನಂತರ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ ಮನೆ ಬಳಿ ಪಕ್ಕದ ಮನೆಯ ಸೀತಾಬಾಯಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಧಾವಿಸಿ ಪರಿಶೀಲನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬ ಬಗ್ಗೆ ಸಧ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕೆಆರ್ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.