ಹರಿಹರದಲ್ಲಿ ಬುಗಿಲೆದ್ದ ಹಿಜಬ್ – ಕೇಸರಿ ವಿವಾದ: ಅಶೃವಾಯು ಸಿಡಿಸಿದ ಪೊಲೀಸರು

ದಾವಣಗೆರೆ:ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಹಿಜಬ್ ಮತ್ತು ಕೇಸರಿ ವಿವಾದ ಬುಗಿಲೆದ್ದಿದ್ದು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಪರಿಸ್ಥಿತಿ ಉದ್ವಿಗ್ನ ಗೊಂಡಾಗ ವಿಧಿ ಇಲ್ಲದೆ ಪೊಲೀಸರು ಅಶೃವಾಯು ಸಿಡಿಸಿದರು.

ಕಾಲೇಜು ಆವರಣದಲ್ಲಿ ನಿಲ್ಲಿಸಲಾಗಿದ್ದ ಏಳೆಂಟು ‌ವಾಹನಗಳನ್ನು ಉದ್ರಿಕ್ತ ಗುಂಪು ಜಕಂಗೊಳಿಸಿದೆ.

ಕೆಲವು ವಿದ್ಯಾರ್ಥಿಗಳು‌ ಕೇಸರಿ ಶಾಲು ಧರಿಸಿ ಬಂದಿದ್ದರೆ ಮುಸಲ್ಮಾನ್ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಬಂದಿದ್ದರು.

ಈ ವೇಳೆ ವಿದ್ಯಾರ್ಥಿಗಳ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಯಿತು.

ವಿಷಯ ತಿಳಿದು ಕಾಲೇಜಿಗೆ ಧಾವಿಸಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು‌ ಲಾಠಿ ಚಾರ್ಜ್ ಹಾಗೂ ಅಶೃವಾಯು ಸಿಡಿಸಿದರು.