ದೇಶದ ಶಾಂತಿ ಹಾಳು ಮಾಡಲು ಮಂತಾಧ ಸಂಘಟನೆಗಳ ಸಂಚು -ಆರಗ ಜ್ಞಾನೇಂದ್ರ

ಬೆಂಗಳೂರು : ಹಿಜಾಬ್ ವಿವಾದದ ಮುಖಾಂತರ ದೇಶದ ಶಾಂತಿಯನ್ನು ಹಾಳು ಮಾಡಲು ಕೆಲವು ಮಂತಾಧ ಸಂಘಟನೆಗಳು ಸಂಚು ನಡೆಸಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಹಿಜಾಬ್ ವಿವಾದ ಹೈಕೋರ್ಟ್ ಮೇಟ್ಟಿಲೇರಿದ್ದು, ಈಗಾಗಲೇ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋರ್ಟ್ ಅದನ್ನು ಪೂರ್ಣ ಪೀಠಕ್ಕೆ ಹಾಸ್ತಾಂತರಿಸಿದೆ, ಹಾಗಾಗಿ  ಪೂರ್ಣ ಪೀಠದ ಮುಂದೆ ಮತ್ತೆ ವಾದ,ಪ್ರತಿವಾದಗಳು ನಡೆಯಲಿದೆ ಎಂದರು.

ಶೀಘ್ರ ತೀರ್ಪು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೀರ್ಪು ಬೇಗನೆ ಬಂದರೆ ರಾಜ್ಯದಲ್ಲಿನ  ವಾತಾವರಣ ತಿಳಿಯಾಗಲಿದೆ ನಮ್ಮ ಸರ್ಕಾರದ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸುತ್ತಿದ್ದಾರೆ. ತೀರ್ಪು ಸರ್ಕಾರದ ನಿಯಮವಾಳಿಗಳ ಪರವಾಗಿ ಬರಬಹುದು ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

ಬೆಂಗಳೂರಿನ ಶಾಲಾ ಕಾಲೇಜುಗಳ ಬಳಿ 144 ಸೆಕ್ಷನ್ ಜಾರಿ ಮಾಡಿರುವುದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಉಂಟಾಗಿರುವ ಮತೀಯ ಸಂಘರ್ಷದಲ್ಲಿ ಯಾವುದೇ ತೊಂದರೆ ಆಗಬಾರದು ಎಂದು 144 ಸೆಕ್ಷನ್ ಅನ್ನು ಜಾರಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಮಕ್ಕಳ ಮನಸ್ಸು ಕೆಡಬಾರದು, ಈ ವಿವಾದವನ್ನು ಶಾಂತಿಯುತವಾಗಿ ತಿಳಿಗೊಳಿಸಬೇಕು ಎಂದು ಆಶಿಸಿದರು.

ಯಾರೇ ಆಗಲಿ ಮತೀಯ ಬುದ್ಧಿಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡದೆ ರಾಜ್ಯದಲ್ಲಿ ಶಾಂತಿ ಮತ್ತು ಸೌರ್ದತೆಯನ್ನು ಕಾಪಾಡಬೇಕೆಂದು ಆರಗ ಜ್ಞಾನೇಂದ್ರ ಮನವಿ ಮಾಡಿದರು.

ಶುಕ್ರವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ ಮುಂದಿನ ದಿನಗಳಲ್ಲಿ ರಾಜ್ಯದ ಸ್ಥಿಯನ್ನು ನೋಡಿ ನಂತರ ಮುಖ್ಯಮಂತ್ರಿಗಳು ರಜೆ ಘೋಷಿಸುವುದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಸಚಿವರು ಹೇಳಿದರು.

ಈ ಹಿಜಾಬ್ ವಿವಾದ ಹಿಂದೆ ಮಂತಾಧ ಸಂಘಟನೆಗಳ ಕೈವಾಡವಿದೆ,  ಸಾರ್ವಜನಿಕರು, ಪೋಷಕರು, ಇದನ್ನು ಅರ್ಥ ಮಾಡಿಕೊಳ್ಳದೆ ಹೋದರೆ ತುಂಬ ಕಷ್ಟವಾಗುತ್ತದೆ ಎಂದರು.