ಬೆಂಗಳೂರು : ಹಿಜಾಬ್ ಸಂಬಂಧ ಯಾವುದೇ ಹೇಳಿಕೆ ನೀಡುವುದು ಬೇಡ, ಎಲ್ಲರೂ ಪ್ರಜಾಪ್ರಭುತ್ವಕ್ಕೆ ಗೌರವ ಕೊಟ್ಟು ನಡೆದುಕೊಳ್ಳಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ವಿದ್ಯಾರ್ಥಿಗಳು, ಪೋಷಕರು ಸಹಕಾರ ನೀಡಬೇಕು, ಕೋರ್ಟ್ ಆದೇಶ ಬರುವವರೆಗೆ ಎಲ್ಲರೂ ಕಾಯೋಣ ಎಂದು ಹೇಳಿದರು.
ಎಲ್ಲರೂ ಶಾಂತಿಯುತವಾಗಿ ವರ್ತನೆ ಮಾಡಬೇಕು, ಯಾರೂ ವಿವಾದಿತ ಹೇಳಿಕೆ ನೀಡಬಾರದು ಎಂದು ತಿಳಿಸಿದರು.
ಹೇಳಿಕೆಗಳು ಪ್ರಚೋದನೆಗೆ ಕಾರಣವಾಗಬಹುದು. ಹೈಕೋರ್ಟ್ ತೀರ್ಪಿನ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ, ಯಾವುದೇ ಆದೇಶ ಬಂದರೂ ಅದನ್ನು ಗೌರವಿಸಬೇಕು.ನ್ಯಾಯಾಲಯದ ಆದೇಶದ ಅನ್ವಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದರು.