ಬೆಂಗಳೂರು: ಹಿಜಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಸ್ತೃತ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಪ್ರಾರಂಭವಾಗಿದ್ದು ಸೋಮವಾರಕ್ಕೆ ಮುಂದೂಡಿಕೆಯಾಗಿದೆ.
ಮುಖ್ಯ ನ್ಯಾಯ ಮೂರ್ತಿ ರಿತುರಾಜ್ ಆವಸ್ತಿ,ನ್ಯಾಯಾಧೀಶರಾದ ಕೃಷ್ಣ ಎಸ್.ದೀಕ್ಷಿತ್ ಹಾಗೂ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ವಾದ ಪ್ರತಿವಾದ ನಡೆದಿದೆ.
ಮೊದಲು ಅರ್ಜಿದಾರರ ಪರ ವಕೀಲ ಸಂಜಯ್ ಹೆಗಡೆ ವಾದ ಮಂಡಿಸಿ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರ ನಿಯಮವಿಲ್ಲ ಎಂದು ಹೇಳಿದರು.
ಉಡುಪಿ ಕುಂದಾಪುರ ಸರ್ಕಾರಿ ಶಾಲೆಯಲ್ಲಿ ಡಿಸೆಂಬರ್ ಕೊನೆಯ ವಾರದಲ್ಲಿ ಹಿಜಬ್ ಘಟನೆ ಪ್ರಾಂಭವಾಯಿತು.ಹಿಜಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಬರಲು ಟೀಚರ್ಸ್ ಅವಕಾಶ ಕೊಡಲಿಲ್ಲ ಎಂದು ಹೇಳಿದರು.
ಜನವರಿ 1ರಂದು ಶಾಲಾಭಿವೃದ್ಧಿ ಸಮಿತಿಗೆ ವಿದ್ಯಾರ್ಥಿನಿಯರು ದೂರು ಕೊಟ್ಟಿದ್ದರು ಎಂದು ಅಂದಿನಿಂದ ನಡೆದ ವಿಚಾರಗಳನ್ನು ಸಂಜಯ್ ಹೆಗಡೆ ವಿವರಿಸಿದರು.
ಅರ್ಜಿದಾರರ ಪರ ಮತ್ತೊಬ್ಬ ವಕೀಲ ದೇವದತ್ತ ಕಾಮತ್ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ವಾದ ಮಂಡಿಸಿ ಹಿಜಬ್ ಧರಿಸಿ ಶಾಲೆಗೆ ಹೋಗಲು ಅನುಮತಿ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ ಮಧ್ಯಂತರ ಆದೇಶ ಕೊಟ್ಟುಬಿಟ್ಟರೆ ಸರಿಯಾಗಲಾರದು, ಅಂತಿಮ ತೀರ್ಪಿಗೇ ವಾದ ಕೇಳಬೇಕೆಂದು ಮನವಿ ಮಾಡಿದರು.
ಈಗಾಗಲೇ ಹಲವಾರು ಶಾಲಾ ಕಾಲೇಜುಗಳಲ್ಲಿ ಹಿಜಬ್ ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇದರಿಂದ ಗಲಭೆಗೆ ಕಾರಣವಾಗುತ್ತದೆ ಎಂದು ಗಮನ ಸೆಳೆದರು.
ನಾವು ಕಾಲೇಜು ಪ್ರಾರಂಭಿಸಲು ಸಿದ್ದರಿದ್ದೇವೆ.ಆದರೆ ಇಂತಹ ಪರಿಸ್ಥಿತಿ ಯಲ್ಲಿ ಶಾಲೆ,ಕಾಲೇಜು ಪ್ರಾರಂಭಿಸುವುದು ಕಷ್ಟ ಎಂದು ತಿಳಿಸಿದರು.
ಸರ್ಕಾರ ತನ್ನಿಷ್ಟದಂತೆ ನಡೆಯಲಾಗಲ್ಲ. ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನ ಗುರುತಿಸಿದೆ ಹಿಜಬ್ ಧರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು ಎಂದು ಅರ್ಜಿದಾರರ ಪರ ವಕೀಲ ಸಂಜಯ್ ಹೆಗಡೆ ವಾದ ಮುಂದುವರಿಸಿದರು.
ಸದ್ಯಕ್ಕೆ ವಿದ್ಯಾರ್ಥಿಗಳು ಶಾಲೆಗೆ ಹೋಗುವಂತಾಗಲಿ ಎಂದು ಮನವಿ ಮಾಡಿದರು.
ವಾದದ ನಡುವೆ ವರ ನಟ ಡಾ.ರಾಜ್ ಕುಮಾರ್ ಅಪಹರಣವಾದಾಗ ಆಗಿದ್ದ ಬಿಕ್ಲಟ್ಟು ಕೂಡಾ ಪ್ರಸ್ತಾಪ ವಾದುದು ವಿಶೇಷ
ವಾದ ಪ್ರತಿವಾದಗಳು ಇನ್ನೂ ನಡೆಯಬೇಕಿದೆ ಅದಕ್ಕಾಗಿ ಸೋಮವಾರ ಮತ್ತೆ ವಿಚಾರಣೆ ಮುಂದುವರಿಸುವುದಾಗಿ ಮುಖ್ಯ ನ್ಯಾಯ ಮೂರ್ತಿ ರಿತುರಾಜ್ ಆವಸ್ತಿ ತಿಳಿಸಿದರು.
ಶಾಲಾ ಕಾಲೇಜುಗಳು ನಡೆಯಬೇಕು ಯಾವುದೇ ಕಾರಣಕ್ಕೂ ಧಾರ್ಮಿಕ ಉಡುಪು ಅಂದರೆ ಆದೇಶ ಬರುವ ತನಕ ಹಿಜಬ್ ಆಗಲಿ ಕೇಸರಿ ಶಾಲಾಗಲಿ ಮತ್ತೊಂದಾಗಲಿ ಧರಿಸಿ ವಿದ್ಯಾರ್ಥಿಗಳು ತರಗತಿಗೆ ಬರುವಂತಿಲ್ಲ ಎಂದು ಹೇಳಿ ಕೋರ್ಟ್ ಸಿಜೆ ಸೂಚಿಸಿದ್ದಾರೆ.
ಇದನ್ನು ಎಲ್ಲರೂ ಪಾಲಿಸಬೇಕೆಂದು ಆದೇಶಿಸಿದ್ದಾರೆ ಅಲ್ಲದೆ ಸೋಮವಾರದಿಂದ ಶಾಲಾ ಕಾಲೇಜು ನಡೆಯಬೇಕು ರಜೆ ನೀಡುವಂತಿಲ್ಲ ಎಂದು ಕಟು ಎಚ್ಚರಿಕೆಯನ್ನು ತ್ರಿಸದಸ್ಯ ಪೀಠ ನೀಡಿದೆ.