ಬೆಂಗಳೂರು:ಕನ್ನಡ ಸಿನಿ ಅಭಿಮಾನಿಗಳಿಗೆ ಮತ್ತೆ ಸಿನಿಮಾ ಹಬ್ಬ ಆರಂಭವಾಗಿದೆ.
ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ನು ಪ್ರತಿ ಶುಕ್ರವಾರ ಎಲ್ಲ ಚಿತ್ರಮಂದಿರಗಳೂ ಸಿನಿಮಾಗಳಿಂದ ತುಂಬಿಕೊಳ್ಳುವುದಂತೂ ಗ್ಯಾರಂಟಿ.
ಶುಕ್ರವಾರ (ಫೆ.11) ಆರು ಕನ್ನಡ ಸಿನಿಮಾಗಳು ಒಟ್ಟಿಗೆ ತೆರೆ ಕಂಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಈ ಪೈಕಿ ಡಾರ್ಲಿಂಗ್ ಕೃಷ್ಣ, ರಾಚೆಲ್ ಡೇವಿಡ್, ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್-2 ರ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ.
ಲವ್ ಮಾಕ್ಟೇಲ್ ಮೊದಲ ಭಾಗ ಹಿಟ್ ಆಗಿರುವುದೇ ಇದಕ್ಕೆ ಕಾರಣ.
ಡಾರ್ಲಿಂಗ್ ಕೃಷ್ಣ ಹಾಗೂ ಅವರ ಪತ್ನಿ,ನಟಿ ಮಿಲನಾ ನಾಗರಾಜ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿರುವುದು ವಿಶೇಷ.
ನಿಧಿಯನ್ನು ಕಳೆದುಕೊಂಡ ಆದಿಯ ಕಥೆ ಎರಡನೇ ಭಾಗದಲ್ಲಿ ಸಾಗುತ್ತದೆ. ಎರಡನೇ ಭಾಗದಲ್ಲಿ ನಿಧಿ ಪಾತ್ರ ಇರುತ್ತದೆ. ಆದಿ ನೆನಪುಗಳಲ್ಲಿ ನಿಧಿ ಜೀವಂತವಾಗಿರುತ್ತಾಳೆ ಎಂದಿದೆ ಚಿತ್ರತಂಡ.
ಇದಲ್ಲದೇ ಮೊದಲ ಬಾರಿಗೆ ಅಚ್ಯುತ್ ಕುಮಾರ್ ನಾಯಕನಟನಾಗಿ ಕಾಣಿಸಿಕೊಂಡಿರುವ ಫೋರ್ ವಾಲ್ಸ್, ಎಸ್.ಎಸ್.ರವಿಗೌಡ ಮತ್ತು ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ನಟನೆಯ ರೌಡಿ ಬೇಬಿ, ಶಾಂಡಿಲ್ಯ ನಿರ್ದೇಶನದ?ಪ್ರೀತಿಗಿಬ್ಬರು, ಕುಮಾರ್ ದತ್ತ ನಿರ್ದೇಶನದ?ಇದೇ ಅಂತರಂಗ ಶುದ್ಧಿ ಈ ಎಲ್ಲ ಸಿನಿಮಾಗಳು ಶುಕ್ರವಾರ ತೆರೆಗಪ್ಪಳಿಸಿವೆ.