ಭೂ ವೀಕ್ಷಣಾ ಉಪಗ್ರಹ ಇಒಎಸ್-04 ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ನುಸುಕಿನಲ್ಲಿ  ಪಿಎಸ್‍ಎಲ್‍ವಿ-ಸಿ52 ರಾಕೆಟ್ ಮೂಲಕ ಭೂ ವೀಕ್ಷಣಾ ಉಪಗ್ರಹ ಇಒಎಸ್-04 ಮತ್ತು ಇತರ ಎರಡು ಚಿಕ್ಕ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರ್ಪಡಿಸುವಲ್ಲಿ ಯಶಸ್ವಿಯಾಯಿತು.

ಇದು ಅದ್ಭುತ ಸಾಧನೆಯಾಗಿದೆ ಎಂದು ಇಸ್ರೋ ಬಣ್ಣಿಸಿದೆ.

25 ಗಂಟೆ, 30 ನಿಮಿಷಗಳ ಕ್ಷಣಗಣನೆ ಬಳಿಕ ಇಸ್ರೋ  ಮುಂಜಾನೆ 5.59ರಲ್ಲಿ   ಪಿಎಸ್‍ಎಲ್‍ವಿ ರಾಕೆಟ್  ಈ ಮೂರು ಉಪಗ್ರಹಗಳನ್ನು  ಆಗಸದೆಡೆಗೆ ಚಿಮ್ಮಿ ಹೊತ್ತೊಯ್ದು ಉದ್ದೇಶಿತ ಕಕ್ಷೆಗೆ ಸೇರ್ಪಡೆಗೊಳಿಸಿತು.

ಈ ವೇಳೆ ವರ್ಷದ ಪ್ರಥಮ ಉಪಗ್ರಹ ಉಡಾವಣೆ ಉಸ್ತುವಾರಿ ಹೊತ್ತಿದ್ದ ವಿಜ್ಞಾನಿಗಳು ಹರ್ಷೋದ್ಗಾರ ಮಾಡಿದರು.

ಸುಮಾರು 17 ನಿಮಿಷ 34 ಸೆಕೆಂಡ್‍ಗಳ ಪಯಣದ ಬಳಿಕ ಎಒಎಸ್-04, ಐಘೆಖPಐ್ಕಉ-ಸ್ಪಾಟ್ ಮತ್ತು ಐಘೆಖS2Sಈ-ಸ್ಪಾಟ್ ಉಪಗ್ರಹಗಳನ್ನು 529ಕಿ.ಮೀ.ಗಳಷ್ಟು ದೂರದ ಸನ್ ಸಿಂಕ್ರೋನಸ್ ಸೌರಕಕ್ಷೆಗೆ ಸಫಲವಾಗಿ ಸೇರ್ಪಡೆಗೊಳಿಸಲಾಯಿತು.

ಬೇರ್ಪಡೆಗೊಂಡ ಬಳಿಕ ಇಒಎಸ್-4ರ ಎರಡು ಸೌರ ಸಾಧನಗಳು ಸ್ವಯಂಚಾಲಿತವಾಗಿ ನಿಯೋಜನೆಗೊಂಡವು.

ಬೆಂಗಳೂರಿನ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ಕಾರ್ಯಜಾಲವು ಉಪಗ್ರಹದ ನಿಯಂತ್ರಣ ಸಾಧಿಸಿತು.

ಮುಂದಿನ ದಿನಗಳಲ್ಲಿ ಉಪಗ್ರಹವನ್ನು ಅದರ ಅಂತಿಮ ಕಾರ್ಯಾರಣೆಯ ಸಂರಚನೆಗೆ ತರಲಾಗುವುದು. ತರುವಾಯ ಅದು ದತ್ತಾಂಶ ಒದಗಿಸಲು ಆರಂಭಿಸುತ್ತದೆ ಎಂದು ಇಸ್ರೋ ಹೇಳಿದೆ.