ಪ್ರಜ್ವಲ್ ರೇವಣ್ಣಗೆ ಸಂಕಷ್ಟ

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣಗೆ ಸಂಕಷ್ಟ ಪ್ರಾರಂಭವಾದಂತೆ ಕಾಣುತ್ತಿದೆ.

ಐಟಿ ತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಸಂಕಷ್ಟ ಎದುರಾಗಿದೆ.

ಪ್ರಜ್ವಲ್ ರೇವಣ್ಣ ಹದಿನೈದನೆ ವಯಸ್ಸಿನಲ್ಲೆ 23 ಕೋಟಿ ಆಸ್ತಿ ಹೊಂದಿದ್ದ ಆರೋಪ ಎದುರಿಸುತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು ಆಸ್ತಿ ವಿವರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಲ್ಲಿಕೆ ಮಾಡಿಲ್ಲವೆಂದು ದೇವರಾಜೆ ಗೌಡ ಎಂಬವರು ಆರೋಪಿಸಿ ನ್ಯಾಯಾಲಯಕ್ಕೆ‌ ಈ ಸಂಬಂಧ ‌ಅರ್ಜಿ ಸಲ್ಲಿಸಿದ್ದರು.

ಚುನಾವಣ ಆಯೋಗಕ್ಕೂ‌ ಪ್ರಜ್ವಲ್  ತಪ್ಪು ಮಾಹಿತಿ ನೀಡಿದ್ದಾರೆಂಬ ಆರೋಪವಿದೆ.

ಬೇನಾಮಿ ಆಸ್ತಿ ಮತ್ತು ಗೋಮಾಳ ಕಬಳಿಕೆ ಆರೋಪವೂ ಪ್ರಜ್ವಲ್ ರೇವಣ್ಣ ಮೇಲೆ ಮಾಡಲಾಗಿತ್ತು.

ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಸರಿಯಾದ ಸಾಕ್ಷಾದಾರ ಇಲ್ಲದ ಕಾರಣ ಪ್ರಜ್ವಲ್ ಮೇಲಿನ ಆರೋಪ ಸಾಬೀತಾಗಿರಲಿಲ್ಲ.

ಹೈಕೋರ್ಟ್  ಆದೇಶವನ್ನ ಪ್ರಶ್ನಿಸಿ ದೂರುದಾರ ದೇವರಾಜೇಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು

ಈಗ ತನಿಖೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿರುವುದರಿಂದ ಪ್ರಜ್ವಲ್ ‌ ರೇವಣ್ಣಗೆ ಮತ್ತೆ ಕಷ್ಟ ಶುರುವಾಗಿದೆ.

ನ್ಯಾ. ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾ. ಸುಂದರೇಶ್ ಅವರನ್ನೊಳಗೊಂಡ ಪೀಠದಿಂದ ತನಿಖೆ ನಡೆಸಲು ಆದೇಶ ನೀಡಿದೆ.