ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಹಿಜಾಬ್ ಹಾಕಲು ಅವಕಾಶವಿಲ್ಲ -ಸಚಿವ ಡಾ.ಅಶ್ವತ್ಥ್ ನಾರಾಯಣ

ಚಾಮರಾಜನಗರ : ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಹಿಜಾಬ್ ಹಾಕಲು ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಹಾಕಿಕೊಳ್ಳುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು.

ಚಾಮರಾಜನಗರದಲ್ಲಿ ಮಂಗಳವಾಋ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಸಮವಸ್ತ್ರ ಪಾಲನೆ ಮಾಡಿ, ಪದವಿ ಕಾಲೇಜುಗಳಲ್ಲಿ ಸಮವಸ್ತ್ರದ ನೀತಿಯಿಲ್ಲ. ಅಲ್ಲಿಗೆ ಬೇಕಾದ್ರೆ ಏನಾದರೂ ಹಾಕ್ಕೊಂಡ್ ಬನ್ನಿ ಎಂದರು.

ನಾಳೆಯಿಂದ ಪದವಿ ಕಾಲೇಜುಗಳು ಆರಂಭವಾಗುತ್ತಿವೆ. ಕೋಮು ಭಾವನೆ ಹುಟ್ಟು ಹಾಕುವಂತೆ ಯಾರೇ ವ್ಯಕ್ತಿಗಳಿದ್ದರೂ ಅದನ್ನು ಮಾಡಬೇಡಿ. ಕಾನೂನನ್ನು ಗೌರವಿಸಿ ಎಂದು ಅವರು ಮನವಿ ಮಾಡಿದರು.

ಸಮಾಜ ಎಂದಮೇಲೆ ಎಲ್ಲವೂ ಇರಲಿದೆ. ಅದನ್ನು ಮೀರಿ ನಿಲ್ಲಬೇಕು, ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಸರ್ಕಾರಕ್ಕಿದೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್ಥಿಕ ತಜ್ಞರು, ಅವರ ಕಾಲದಲ್ಲಿ ಎಷ್ಟೆಷ್ಟು ಸಾಲ ತೆಗೆದುಕೊಂಡಿದ್ದರು, ಸಾಲದಭಾರವನ್ನು ಸಮಾಜ ಮತ್ತು ಬೇರೆ ಸರ್ಕಾರಕ್ಕೆ ಹೊರಿಸಿರುವ ಬಗ್ಗೆ ಮೊದಲು ಅವರು ಮಾತನಾಡಬೇಕು. ನಮ್ಮ ಈ ಅವಧಿಯಲ್ಲಿ ಕೊರೊನಾ ಕಾಲದಲ್ಲಿ ಬಹಳ ಉತ್ತಮವಾಗಿ ಸರ್ಕಾರ ಕೆಲಸ ಮಾಡಿದೆ. ಅವರವರ ಬೆನ್ನನ್ನು ಮೊದಲು ಅವರು ನೋಡಿಕೊಳ್ಳಬೇಕು ಎಮದು ಸಚಿವರು ಹೇಳಿದರು.