ಸೈಬರ್ ಕ್ರೈಮ್ ಧೋಕಾ: 4,73,056ರೂ. ಮರುಪಾವತಿ ಮಾಡಿದ ಪೊಲೀಸರು

ಮೈಸೂರು:  ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 5 ಪ್ರತ್ಯೇಕ ಪ್ರಕರಣಗಳಲ್ಲಿ ಆನ್‍ಲೈನ್ ವಂಚನೆ ಮೂಲಕ ಹಣ ಕಳೆದು ಕೊಂಡವರಿಗೆ‌ ಒಟ್ಟು 4,73,056 ರೂಗಳನ್ನು ಮರುಪಾವತಿ ಮಾಡಿಕೊಡಲಾಗಿದೆ.

ಮೈಸೂರು ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ, ಸೈಬರ್ ಕ್ರೈಂ ಗೆ ಸಂಬಂದಿಸಿದಂತೆ ಪ್ರಕರಣಗಳು ದಾಖಲಾಗಿದ್ದವು.

ಅದರಲ್ಲಿ ಡಾ. ವೆಂಕಟಸುಬ್ಬಯ್ಯ ಅವರು ಶಾರದನಗರ ನಿವಾಸಿಯಾಗಿದ್ದು ಕ್ರೆಡಿಟ್ ಕಾರ್ಡ್‍ನಿಂದ ಒಟ್ಟು 1,93,056ರೂ,ವಾಣಿ ಶ್ರೀ ಅವರು ಚೆಲುವಾಂಬ ಅಗ್ರಹಾರ ನಿವಾಸಿಯಾಗಿದ್ದು ಪೋನ್ ಪೇ ಮೂಲಕ 50,000 ರೂ,

ಬೋಪ್ಯಯ ಅವರು ವಿಜಯನಗರ ನಿವಾಸಿಯಾಗಿದ್ದುಜ ಆನ್‍ಲೈನ್ ಬ್ಯಾಂಕಿಂಗ್ ಮೂಲಕ 30,000ರೂ, ವಿನೋದ ಬಾಯಿ ಕುವೆಂಪುನಗರ ನಿವಾಸಿಯಾಗಿದ್ದು ಆನ್‍ಲೈನ್ ಬ್ಯಾಂಕಿಂಗ್ ಮೂಲಕ  1,00,000- ರೂ

ಡಾ.ರಾಜೇಶ್ವರಿ ಮೇಟಗಳ್ಳಿ ನಿವಾಸಿಯಾಗಿದ್ದು ಕೆವೈಸಿ ಆಪ್ಡೇಟ್ ಎಂದು ಹೇಳಿ 1,00,000ರೂ ಹಣವನ್ನು ದುರುಳರು

ವಂಚಿಸಿದ್ದರು.

ಈ‌ಬಗ್ಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

5 ಪ್ರತ್ಯೇಕ ಪ್ರಕರಣಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದ ಒಟ್ಟು 4,73,056 ರೂ ಹಣವನ್ನು ಸೆನ್ ಕ್ರೈಂ ಪೊಲೀಸ್ ಠಾಣೆಯ ಕ್ವಿಕ್ ರೆಸ್ಪಾಂನ್ಸ್ ಟೀಮ್‍ನ ಸಿಬ್ಬಂದಿ ತ್ವರಿತವಾಗಿ ಪತ್ತೆ ಹಚ್ಚಿದ್ದಾರೆ.

ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿ, ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಣ ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ.