ಅಕ್ರಮ ಅಕ್ಕಿ ಸಾಗಾಟ: ಇಬ್ಬರ ಸೆರೆ

ಚಾಮರಾಜನಗರ: ವಾಹನದ ಹೊರಗೆ ತರಕಾರಿ ಸಾಗಿಸುವ ಖಾಲಿ ಕ್ರೇಟ್ ತುಂಬಿಕೊಂಡು ಒಳಭಾಗದಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಸುತ್ತಿದ್ದವರನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಈ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಫೈರೋಜ್ ಖಾನ್ ಹಾಗೂ ಗುಂಡ್ಲುಪೇಟೆಯ ಪ್ರೇಮ್ ಕುಮಾರ್ ಎಂಬಿಬ್ಬರು ಆರೋಪಿಗಳು‌ ಸೆರೆ ಸಿಕ್ಕಿದ್ದಾರೆ.

ಪ್ರೇಮ್ ಕುಮಾರ್ ಗುಂಡ್ಲುಪೇಟೆಯಲ್ಲಿ ದಾಸ್ತಾನಿಟ್ಟಿದ್ದ ಅಕ್ಕಿಯನ್ನು ಫೈರೋಜ್ ಖಾನ್ ಮಂಡ್ಯ ಕಡೆಗೆ ಸಾಗಾಟ ನಡೆಸುತ್ತಿದ್ದುದಾಗಿ ತಿಳಿದುಬಂದಿದೆ.

ಕಾರ್ಯಾಚರಣೆ ವೇಳೆ 6,250 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, 10 ಕೆಜಿ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.