ರಸ್ತೆ ಅಪಘಾತ: ಗಾಯಾಳು ಸಾವು

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ 

ಚಾಮರಾಜನಗರ: ಪಟ್ಟಣದ ಹೊರವಲಯದ ಸಮೀಪವಿರೊ ಮೂಡ್ಲುಪುರದ ಸೂರ್ಯೋದಯ ಕಲ್ಯಾಣ ಮಂಟಪ  ಮುಂಭಾಗ  ನಡೆದ ರಸ್ತೆ ಅಪಘಾತದಲ್ಲಿ  ಗಾಯಾಳು ಸಂಜೆ ಸಾವನ್ನಪ್ಪಿದ್ದಾರೆ. 

ಸರಿಸುಮಾರು ೧೧ ರ ಸಮಯದಲ್ಲಿ ಬೈಕ್  ಹಾಗೂ ಆಟೋ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ನಾರಾಯಣ (೨೬) ತಲೆಗೆ ಪೆಟ್ಟುಬಿದ್ದಿತ್ತು.  ಪ್ರಜ್ಞೆ ತಪ್ಪಿದ್ದ   ಇವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಸಾವನ್ನಪ್ಪಿದ್ದಾರೆ .

ಮೃತ ವ್ಯಕ್ತಿ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರ ಗ್ರಾಮದ ನಿವಾಸಿ ಪ್ರಸ್ತುತ ತಾಲೂಕಿನ ಬ್ಯಾಡ್ ಮುಳ್ಳು ಗ್ರಾಮದಲ್ಲಿ ತಾಯಿ ಜೊತೆ ವಾಸವಾಗಿದ್ದರು.