ಪಾಪ ಪರಿಹಾರಕ್ಕೆ ಕಾಂಗ್ರೆಸ್ ಪಾದಯಾತ್ರೆ -ಕಾರಜೋಳ

ಬಾಗಲಕೋಟೆ: ಅಧಿಕಾರದಲ್ಲಿ ಇದ್ದಾಗ ಏನೂ ಮಾಡದ ಪಾಪ ಕಾಂಗ್ರೆಸಿಗರನ್ನು ಕಾಡುತ್ತಿದ್ದು, ಆ ಪಾಪ ಪರಿಹಾರ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಕಾಂಗ್ರೆಸ್‍ನವರಿಗೆ ಹೊಸದೇನೂ ಅಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಪೈಪೋಟಿ ನಡೆಯುತ್ತಿದೆ ಎಂದರು.

ಬಜೆಟ್‍ನಲ್ಲಿ ಖಂಡಿತ ನೀರಾವರಿಗೆ ವಿಶೇಷ ಕೊಡುಗೆ ಕೊಡುತ್ತೇವೆ ಎಂದು ‌ತಿಳಿಸಿದರು.

ಕಾಂಗ್ರೆಸ್ ನಡುವೆ ಬಿಜೆಪಿಯವರೇ ಜಗಳ ಹಚ್ಚುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪತ್ರಿಕ್ರಿಯಿಸಿದ ಕಾರಜೋಳ, ಅವರ ಜುಗಲ್ ಬಂಧಿಯನ್ನು ಜನ ನೋಡುತ್ತಿದ್ದಾರೆ. ಇದರಲ್ಲಿ ನಾವು ಜಗಳ ಹಚ್ಚುವುದೇನಿದೆ, ಹಾಲು ಕುಡಿದು ಸಾಯುವವರಿಗೆ ಯಾರಾದ್ರೂ ವಿಷ ಹಾಕಿ ಸಾಯಿಸುತ್ತಾರೆಯೇ ಎಂದು ವ್ಯಂಗ್ಯವಾಡಿದರು.