ವಿದ್ಯಾರ್ಥಿಗಳ ನೆರವಿಗೆ ಪೆÇೀಲೆಂಡ್, ರೊಮೇನಿಯಾ ಸಹಯೋಗ -ಜೋಶಿ

ಬೆಳಗಾವಿ: ಬಹಳ ವಿಷಮ ಸನ್ನಿವೇಶದಲ್ಲಿ ಉಕ್ರೇನ್ ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೋಶಿ ಅವರು ನಮ್ಮ ವಿದ್ಯಾರ್ಥಿಗಳ ನೆರವಿಗೆ ಪೆÇೀಲೆಂಡ್, ರೊಮೇನಿಯಾದಂತಹ ದೇಶಗಳ ಸಹಯೋಗ ಪಡೆಯಲಾಗುತ್ತಿದೆ ಎಂದು ಹೇಳಿದರು.

ಯುದ್ಧದಲ್ಲಿ ತೊಡಗಿರುವ ಉಕ್ರೇನ್ ರಷ್ಯಾಗಳ ಜೊತೆಗೂ ಭಾರತ ಮಾತನಾಡುತ್ತಿದೆ. ವಿದೇಶಾಂಗ ಸಚಿವಾಲಯ ಮತ್ತು ಕೇಂದ್ರ ವಿಮಾನಯಾನ ಸಚಿವಾಲಯಗಳು ಭಾರತೀಯರನ್ನು ದೇಶಕ್ಕೆ ಕರೆತರಲು ಎಡೆಬಿಡದ ಪ್ರಯತ್ನ ನಡೆಸಿವೆ ಎಂದು ಹೇಳಿದರು.

ಅಲ್ಲಿ ಇನ್ನೂ ಸಿಲುಕಿಕೊಂಡಿರುವವರನ್ನು ರಕ್ಷಿಸಿ ತರಬೇಕಿದೆ. ನನಗೆ ವೈಯಕ್ತಿಕವಾಗಿ ಬರುತ್ತಿರುವ ಫೆÇೀನ್ ಕಾಲ್ ಗಳನ್ನು ಸಹ ನಾನು ಗಂಭೀರವಾಗಿ ಪರಿಗಣಿಸಿ ಸಹಾಯ ಮಾಡುತ್ತಿದ್ದೇನೆ ಎಂದವರು ತಿಳಿಸಿದರು.