ಎಸಿಬಿ ಬಲೆಗೆ ಇಬ್ಬರು ಭ್ರಷ್ಟರು

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ : ಕಾಮಗಾರಿ ಬಿಲ್ ಮಾಡಿಕೊಡಲು ಲಕ್ಷ ರೂ. ಲಂಚ ಕೇಳಿದ ಆರೋಪದ ಮೇರೆಗೆ ಇಬ್ಬರನ್ನು ಚಾಮರಾಜನಗರ ಡಿವೈಎಸ್ಪಿ ಎಸಿಬಿ ತಂಡ ಬಂಧಿಸಿದೆ.

ಚಾಮರಾಜನಗರ ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ಯಾಮ್ ಸುಂದರ್, ಎಇ ರಾಜಶೇಖರ್ ಎಸಿಬಿ ಬಲೆಗೆ ಸಿಕ್ಕಿಬಿದ್ದವರಾಗಿದ್ದಾರೆ.

ಮೂರುವರೆ ಲಕ್ಷ ರೂಪಾಯಿಗಳ ಕಾಮಗಾರಿ ಬಿಲ್ ಮಾಡಿಕೊಡಲು ಒಂದು ಲಕ್ಷ ರೂಗಳನ್ನು ಲಂಚವಾಗಿ ನೀಡುವಂತೆ ಪೀಡಿಸಿದರು.

ದೂರುದಾರನಿಗೆ ಹಣವನ್ನು ಮೈಸೂರಿಗೆ ತರಲು ಹೇಳಿದ್ದು, ಮೈಸೂರಿನ ಸಿದಾರ್ಥ ನಗರದ ಕಮಾನು ಗೇಟು ಮುಂಭಾಗ ದೂರುದಾರರಿಂದ ಒಂದು ಲಕ್ಷ ರೂ ಸ್ವೀಕರಿಸಿತ್ತಿದ್ದ ಸಂದರ್ಭದಲ್ಲಿ ಚಾಮರಾಜನಗರ ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ್ ಹಾಗೂ ಅವರ ತಂಡದ ಕೈಗೆ ಸಿಕ್ಕಿಬಿದ್ದಿದ್ದಾರೆ ಈ ಇಬ್ಬರು ಸಿಕ್ಕಿ ಬಿದಿದ್ದಾರೆ.