ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ:ಗುಂಡ್ಲುಪೇಟೆ ಮಡಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಬಿಳಿಕಲ್ಲಿನ ಗಣಿಗಾರಿಕೆಯ ಗುಡ್ಡ ಕುಸಿತದ ಪರಿಣಾಮ ಕಾರ್ಮಿಕರು ಸಿಲುಕಿರಬಹುದಾದ ಹಿನ್ನೆಲೆಯಲ್ಲಿ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ , ಅಗ್ನಿಶಾಮಕ ದಳ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಕಾರ್ಯಚರಣೆ ಮುಂದುವರೆಸಿದ್ದಾರೆ.
ಗುಂಡ್ಲುಪೇಟೆ ಮಡಹಳ್ಳಿ ಸರ್ವೆ ನಂ ೧೯೨ ರಲ್ಲಿ ಬಿಳಿಕಲ್ಲು ಗುಡ್ಡ ನಿನ್ನೆ ೧೧ ರ ಸಮಯದಲ್ಲಿ ಕುಸಿದಿತ್ತು. ಇದರಲ್ಲಿ ಹಲವಾರು ಕಾರ್ಮಿಕರು ಸಿಲುಕಿರಬಹುದಾದ ಶಂಕೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಾರ್ಯ ಚುರುಕುಗೊಳಿಸಲು ಸೂಚಿಸಿತ್ತು.
ಈಗಾಗಲೇ ಚಾಮರಾಜನಗರ, ನಂಜನಗೂಡು,ಮೈಸೂರು, ಬೆಂಗಳೂರಿನ NDRF ತಂಡಗಳು ಕಾರ್ಮಿಕರ ಶೋಧ ಕಾರ್ಯ ಮುಂದುವರೆಸಿದ್ದಾರೆ.
ನಿನ್ನೆ ಒಂದು ಶವವನ್ನು ಹೊರತೆಗೆಯಲಾಗಿತ್ತು ಇಂದೂ ಮತ್ತೊಂದು ಶವ ಹೊರತೆಗೆದಿದ್ದಾರೆ.
ಮೈಸೂರು ವಲಯದ ಅಗ್ನಿ ಶಾಮಕ ದಳದ ಮುಖ್ಯ ಅದಧಿಕಾರಿ ಕೆ.ಎನ್. ಜಯರಾಮಯ್ಯ, ಚಾಮರಾಜನಗರ ವಲಯದ ಅಗ್ನಿ ಶಾಮಕದಳದ ಅದಧಿಕಾರಿ ನವೀನ್ ಕುಮಾರ್ ಹಾಗೂ ತಂಡದವರಿಂದ ಕಾರ್ಯಚರಣೆ ಮುಂದುವರೆದಿದೆ.