ಹುಡುಗಿ ವಿಚಾರಕ್ಕಾಗಿ ಜಗಳ: ಒಬ್ಬನ ಕೊಲೆ

ಬೆಂಗಳೂರು: ಹುಡುಗಿ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆದು ಒಬ್ಬನ ಕೊಲೆಯಾಗಿರುವ ಘಟನೆ ಬೆಂಗಳೂರಿನ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಮೊಹಮ್ಮದ್ ಉಸ್ಮಾನ್ ಕೊಲೆಯಾದ ಯುವಕ

ಈ ಪ್ರಕರಣ ಸಂಬಂಧ‌ ಒಟ್ಟು ಐದು ಮಂದಿಯನ್ನು ಪುಲಿಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದರಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಸೈಯದ್ ಮೋಯಿನ್ ಹಾಗೂ, ಅದ್ನಾನ್ ಖಾನ್ ಗುಂಡೇಟು ತಿಂದು ಗಾಯಗೊಂಡಿದ್ದಾರೆ.

ಉಳಿದ ಆರೋಪಿಗಳಾದ ಅರ್ಬಾಜ್, ಮಜರ್, ಸೈಯದ್ ಸಾಕಿಬ್​​​​ನನ್ನು ಬಂಧಿಸಿ  ವಿಚಾರಣೆಗೆ ಒಳಪಡಿಸಲಾಗಿದೆ.

ಮಂಗಳವಾರ ಮಧ್ಯರಾತ್ರಿ ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಉಸ್ಮಾನ್ ಹಾಗೂ ಮೋಹೀನ್ ನಡುವೆ ಹುಡುಗಿ ವಿಚಾರಕ್ಕಾಗಿ ಗಲಾಟೆಯಾಗಿದೆ.

ಆ ಸಂದರ್ಭದಲ್ಲಿ ಮೊಹೀನ್ ಶಿವಾಜಿನಗರದಿಂದ ಹುಡುಗರನ್ನು ಕರೆಸಿಕೊಂಡು  ಉಸ್ಮಾನ್ ನನ್ನು ‌ಹತ್ಯೆ ಮಾಡಿಸಿದ್ದಾನೆ ನಂತರ ಎಲ್ಲರೂ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳ‌‌ಕ್ಕೆ ಭೇಟಿ ನೀಡಿದ ಪಿಎಸ್ಐ ರೂಮಾನ್ ಮತ್ತು ಪಿಎ ಆನಂದ್ ನೇತೃತ್ವದ ತಂಡ ಹಂತಕರ ಪತ್ತೆಗೆ ಶೋಧ ಕಾರ್ಯ‌ ಕೈಗೊಂಡರು.

ಬುಧವಾರ ಬೆಳಗಿವ ಜಾವ ಹಂತಕರ ಸುಳಿವು ಪಡೆದು ಮೋಹಿನ್ ಹಾಗೂ ಅದ್ನಾನ್ ಖಾನ್ ಎಂಬ‌ ಆರೋಪಗಳನ್ನು ಬಂಧಿಸಲು ಹೋದಾಗ  ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ‌.‌

ತಕ್ಷಣ ಪೊಲೀಸರು ಶರಣಾಗುವಂತೆ ಆರೋಪಿಗಳಿಗೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಆದರೆ ಇದಕ್ಕೂ ಬಗ್ಗದೆ  ಆರೋಪಿಗಳು ಮೊಂಡಾಟ ಮಾಡಿದ್ದರಿಂದ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.