ಕಾರು ಅಪಘಾತ: ರಾಜ್ಯಸಭಾ ಸದಸ್ಯ ವಿಳಂಗೋವನ್ ಪುತ್ರ ಸಾವು

ಚನ್ನೈ: ಅತಿ ವೇಗವಾಗಿ ಚಲಿಸಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿದ ಪರಿಣಾಮ ಡಿಎಂಕೆ ರಾಜ್ಯಸಭಾ ಸದಸ್ಯ ಎನ್.ಆರ್.ವಿಳಂಗೋವನ್ ಅವರ ಪುತ್ರ ಮೃತಪಟ್ಟಿದ್ದಾರೆ.

ರಾಕೇಶ್ ಮೃತಪಟ್ಟ ದುರ್ದೈವಿ. ಅವರ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಕೇಶ್ ಮತ್ತು ಆತನ ಸ್ನೇಹಿತ ಪುದುಚೇರಿಗೆ ತೆರಳುವಾಗ ಕೊಟ್ಟಕೊಪ್ಪಂ ಬಳಿ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ ಗೆ ಹೊಡೆದು ಉರುಳಿ ಬಿದ್ದಿದೆ.

ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಒಳಗಡೆ ಸಿಲುಕಿದ್ದ ಮೃತ ದೇಹವನ್ನು ಹೊರ ತೆಗೆದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ರಾಕೇಶ್ ಅವರ ಸ್ನೇಹಿತನನ್ನು ಪಾಂಡಿಚೇರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.